ಕಾಸರಗೋಡು : ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ಬೆಳ್ಳಿಹಬ್ಬ ನಿಮಿತ್ತ ಸರಣಿ ರಜತ ರಂಗದ ಹತ್ತನೇ ಕಾರ್ಯಕ್ರಮ ಅಡೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವ ವೇಳೆ ನಡೆಯಿತು. ಹಿರಿಯ ಉದ್ಯಮಿ ಎಡಕ್ಕಾನ ಮಹಾಬಲೇಶ್ವರ ಭಟ್ ಮುಖ್ಯ ಅತಿಥಿಯಾಗಿದ್ದರು. ರಜತರಂಗ ಅಧ್ಯಕ್ಷ ಡಾ.ಹರಿಕಿರಣ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಗತಿಸಿದ ಹಿರಿಯ ಚೇತನರಾದ ಅಡೂರು ಶಿವ ಮದ್ಲೆಗಾರ ಮತ್ತು ಸೂರಿಕುಮೇರು ಗೋವಿಂದ ಭಟ್ ಅವರ ಕುರಿತು ಶೇಣಿ ವೇಣುಗೋಪಾಲ ಭಟ್ ಸಂಸ್ಮರಣೆ ಭಾಷಣ ಮಾಡಿದರು. ಕಲಾವಿದ ಅಡೂರು ಲಕ್ಷ್ಮೀನಾರಾಯಣ ಅವರಿಗೆ ಗೌರವಾರ್ಪಣೆ ನಡೆಯಿತು. ಅಡೂರು ದೇವಾಲಯ ಉತ್ಸವ ಸಮಿತಿ ಉಪಾಧ್ಯಕ್ಷ ಬೆಳ್ಳಿಪ್ಪಾಡಿ ಸದಾಶಿವ ರೈ ಉಪಸ್ಥಿತರಿದ್ದರು. ತಲ್ಪಣಾಜೆ ವೆಂಕಟ್ರಮಣ ಭಟ್ ಸ್ವಾಗತಿಸಿ, ಪತ್ರಕರ್ತ ವೀಜಿ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಮೂರ್ತಿ ಅಡಿಗ ಕೂಡ್ಲು ವಂದಿಸಿದರು. ತರಬೇತಿ ಕೇಂದ್ರದ ಸದಸ್ಯರಿಂದ "ಕಿರಾತಾರ್ಜುನ" ಯಕ್ಷಗಾನ ಪ್ರದರ್ಶನ ನಡೆಯಿತು.

0 Comments