ಯುಎಇ ನಲ್ಲಿ ಕಳೆದ 23 ವರ್ಷಗಳಿಂದ ಕನ್ನಡ ಪರಸೇವೆಗಳನ್ನು ಮಾಡುತ್ತಾ ವಿಶೇಷ ಮತ್ತು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಅನಿವಾಸಿ ಕನ್ನಡಿಗರಿಗೆ ಆಯೋಜನೆ ಮಾಡುವ ಹೆಮ್ಮಯ ಸಂಸ್ಥೆ ಕರ್ನಾಟಕ ಸಂಘ ಶಾರ್ಜಾ. ಈ ಸಂಸ್ಥೆಯ 2026-28 ರ ನೂತನ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು ಸಮಿತಿಯ ನೂತನ ಅಧ್ಯಕ್ಷರಾಗಿ ಯುಎಇನಲ್ಲಿ ಹಲವಾರು ರಂಗಭೂಮಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಯಶಸ್ವಿಗೊಳಿಸಿದ ರಂಗಸಾರಥಿ ವಿಶ್ವನಾಥ್ ಶೆಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಅಜ್ಮಲ್ ಸಯ್ಯದ್, ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಕುಂದಾಪುರ ಮತ್ತು ಕೋಶಾಧೀಕಾರಿಯಾಗಿ ಸುಂಗಧರಾಜ್ ಬೇಕಲ್ ಮರು ಆಯ್ಕೆಯಾಗಿದ್ದಾರೆ. ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಸಾಲಿಯಾನ್ ಮತ್ತು ಜೊತೆ ಕೋಶಾಧಿಕಾರಿಯಾಗಿ ರಘುರಾಮ್ ಶೆಟ್ಟಿಗಾರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರೀತೇಶ್ ಅಂಚನ್, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರೇಮ್ ಶ್ರಿ ಪೂಜಾರಿ, ಕ್ರೀಡಾ ಕಾರ್ಯದರ್ಶಿಯಾಗಿ ಅಮರ್ ಉಮೇಶ್, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಜೀವನ್ ಮತ್ತು ಅಬ್ರಹಾರ್ ಅಹ್ಮದ್ ಅವರನ್ನು ಆಯ್ಕೆಮಾಡಲಾಯಿತು. ಸಂಘದ ಸಲಹಾ ಸಮಿತಿಯ ನಿರ್ದೇಶಕರಾಗಿ ವಕ್ವಾಡಿ ಪ್ರವೀಣ್ ಶೆಟ್ಟಿ, ಹರೀಶ್ ಶೇರಿಗಾರ್, ಜೋಸೆಫ್ ಮಥಾಯಿಸ್, ರಾಮಚಂದ್ರ ಹೆಗ್ಡೆ ಮುಂದುವರಿಯಲಿದ್ದಾರೆ. ಸಂಘದ ಸಲಹೆಗಾರರಾಗಿ ಎಂ.ಇ.ಮೂಳುರು, ಗಣೇಶ್ ರೈ, ಸತೀಶ್ ಪೂಜಾರಿ ಮತ್ತು ನೋಯೆಲ್ ಡಿ ಅಲ್ಮೆಡಾ ಮುಂದುವರಿಯಲಿದ್ದಾರೆ.


0 Comments