ಪಾಲಕ್ಕಾಡ್ : 2026ರ ಕೇರಳಂ ವಿಧಾನಸಭಾ ಚುನಾವಣೆಯ ಕಹಳೆ ಮೊಳಗಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಾಲಕ್ಕಾಡ್‌ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕೇರಳದ ಸಾಂಪ್ರದಾಯಿಕ ಚರ್ಮವಾದ್ಯ ‘ಚೆಂಡೆ’ ಬಾರಿಸುವ ಮೂಲಕ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದರು. ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆಯುವ ತಮ್ಮ ವಿಶಿಷ್ಟ ಶೈಲಿಯಲ್ಲಿ ಮೋದಿ ಅವರು ಕೆಲ ಕಾಲ ವಾದ್ಯ ನುಡಿಸಿದ್ದು, ನೆರೆದಿದ್ದ ಸಾವಿರಾರು ಬೆಂಬಲಿಗರು ಹರ್ಷೋದ್ಗಾರ ಮಾಡಿದರು.
ಕೇರಳದಲ್ಲಿ ನೆಲೆಯೂರಲು ಬಿಜೆಪಿ ನಡೆಸುತ್ತಿರುವ ಈ ಬೃಹತ್ ಕ್ಯಾಂಪೇನ್ ಸಾಮಾಜಿಕ ಜಾಲತಾಣ ಹಾಗೂ ಪತ್ರಿಕಾ,ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದೆ

0 Comments