Ticker

6/recent/ticker-posts

Ad Code

ಎಣ್ಮಕಜೆ ಪಂ.ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಲಿನ್ಯ ಉಪೇಕ್ಷೆ ವಿರುದ್ಧ ತೀವ್ರ ನಿಗಾ : 5ಸಾವಿರದಿಂದ 50 ಸಾವಿರದವರೆಗೆ ದಂಡ


 ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಮಾಲಿನ್ಯ ಉಪೇಕ್ಷಿಸುವುದು ವ್ಯಾಪಕಗೊಂಡಿದ್ದು ಇದರ ವಿರುದ್ಧ ಪಂಚಾಯತ್ ಮತ್ತು ಜಿಲ್ಲಾ ಜಾಗೃತ ದಳ ನಿಗಾ ತೀವ್ರಗೊಳಿಸಿದೆ. ಎಣ್ಮಕಜೆ ಗ್ರಾಮ ಪಂಚಾಯತ್‌ನ ಇಡಿಯಡ್ಕದಿಂದ ಶೇಣಿವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ತ್ಯಾಜ್ಯ ಉಪೇಕ್ಷೆ ಕಂಡು ಬಂದಿದ್ದು ಈಗಾಗಲೇ ವಿವಿಧೆಡೆ ಸ್ಥಾಪಿಸಿದ ಸಿಸಿ ಕ್ಯಾಮರ ಮೂಲಕ ಕೆಲವರನ್ನು ಪತ್ತೆ ಹಚ್ಚಲಾಗಿದೆ. ಅಂತಹವರನ್ನು ಕೇಂದ್ರೀಕರಿಸಿ ನಿಗಾ ವಹಿಸಲಾಗಿದ್ದು ಇನ್ನು ಕೆಲವು ಬಾಡಿಗೆ ಕಟ್ಟಡಗಳನ್ನು ಕೇಂದ್ರೀಕರಿಸಿ ತ್ಯಾಜ್ಯ ಹೊರ ಚೆಲ್ಲುವ ಪ್ರಕ್ರಿಯೆಯೂ ಕಂಡು ಬಂದಿದೆ. ಇಂತಹ ಸಂಸ್ಥೆಗಳ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಮುನ್ಸೂಚನೆ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ತ್ಯಾಜ್ಯ ವಿರುದ್ಧ ಕಟ್ಟು ನಿಟ್ಟಿನ‌ ಕ್ರಮ ಬಿಗಿಗೊಳಿಸಲಾಗುತ್ತಿದೆ. ನಿಯಮ ಉಲ್ಲಂಘಿಸುವವರು ಕಂಡುಬಂದರೆ 5,000ದಿಂದ 50,000 ರೂ.ಗಳವರೆಗೆ ದಂಡ ವಿಧಿಸಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

Post a Comment

0 Comments