Ticker

6/recent/ticker-posts

Ad Code

ಮಾರ್ಚ್ 29ರಿಂದ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ

 

ಪೆರ್ಲ : ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಉತ್ಸವ ಮಾ.29ರಿಂದ ಏ.3ರ ವರೆಗೆ ಬ್ರಹ್ಮಶ್ರೀ ದೇಲಂಪಾಡಿ ಅನಿರುದ್ಧ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಮಾ.29ರಂದು ಬೆಳಗ್ಗೆ 7.30ಕ್ಕೆ ಬೆಳಗ್ಗಿನ  ಪೂಜೆ, 10ರಿಂದ ಗಣಪತಿ ಹೋಮ, ನಡೆಯಲ್ಲಿ ಪ್ರಾರ್ಥನೆ, ಶ್ರೀ ದೇವರ ರಾಜಾಂಗಣ ಪ್ರವೇಶ, ಧ್ವಜಾರೋಹಣ, ನವಕಾಭಿಷೇಕ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 8ಕ್ಕೆ ಶ್ರೀ ಭೂತಬಲಿ, ಕಟ್ಟೆ ಪೂಜೆ, ಮಾ.30ರಂದು ಬೆಳಗ್ಗೆ 7.30ಕ್ಕೆ ಬೆಳಗ್ಗಿನ ಪೂಜೆ, 10ಕ್ಕೆ ಶ್ರೀ ಭೂತಬಲಿ, ದರ್ಶನಬಲಿ, ನವಕಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 8ಕ್ಕೆ ಶ್ರೀ ಭೂತಬಲಿ, ಕಟ್ಟೆ ಪೂಜೆ, ಮಾ.31ರಂದು ಬೆಳಗ್ಗೆ 7.30ಕ್ಕೆ ಬೆಳಗ್ಗಿನ ಪೂಜೆ, 10ಕ್ಕೆ ಶ್ರೀಬಲಿ, ನವಕಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 8ಕ್ಕೆ ದೀಪೋತ್ಸವ, ಶ್ರೀ ಭೂತಬಲಿ, ಪಡು ಭಾಗಕ್ಕೆ ಸವಾರಿ, ಕಟ್ಟೆ ಪೂಜೆ ಜರಗಲಿದೆ.

ಏ.1ರಂದು ಬೆಳಗ್ಗೆ 7.30ಕ್ಕೆ ಬೆಳಗ್ಗಿನ ಪೂಜೆ, 10ಕ್ಕೆ ಶ್ರೀ ಬಲಿ, ಅಯ್ಯಂಗಾಯಿ ದರ್ಶನಬಲಿ, ನವಕಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ರಾತ್ರಿ 9ಕ್ಕೆ ಶ್ರೀ ಭೂತಬಲಿ, ಕಟ್ಟೆ ಪೂಜೆ, ರಥೋತ್ಸವ, ಬೆಡಿ, ದರ್ಶನ, ಶಯನ, ಏ.2ರಂದು ಬೆಳಗ್ಗೆ ಕವಾಟೋದ್ಘಾಟನೆ, ಜಲದ್ರೋಣಿ ಪೂಜೆ, ಅಭಿಷೇಕ, ಹಣ್ಣುಕಾಯಿ ಸಮರ್ಪಣೆ, ಯಾತ್ರಾ ಹೋಮ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ (ಮಧ್ಯಾಹ್ನ 1.30ರವರೆಗೆ), 1.30ಕ್ಕೆ ಶ್ರೀ ಬಲಿ, ಕಟ್ಟೆ ಪೂಜೆ, ಅವಭೃತ ಸ್ನಾನ, ದರ್ಶನಬಲಿ, ರಾಜಾಂಗಣದಲ್ಲಿ ಶ್ರೀಮುಡಿ ಗಂಧ ಪ್ರಸಾದ ವಿತರಣೆ, ಬಟ್ಟಲು ಅರ್ಪಣೆ, ಧ್ವಜಾವರೋಹಣ, ಮಂತ್ರಾಕ್ಷತೆ, ಏ.3ರಂದು ಬೆಳಗ್ಗೆ 9ಕ್ಕೆ ಶ್ರೀ ವ್ಯಾಘ್ರ ದೈವ (ಪಿಲಿಚಾಮುಂಡಿ) ನೇಮ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮಾ.31ರಂದು ಮಧ್ಯಾಹ್ನ 12-30 ರಿಂದ "ಯಕ್ಷಾಂತರಂಗ" ಸದಸ್ಯರಿಂದ "ಸಮರ ಸೌಗಂಧಿಕಾ" ಯಕ್ಷಗಾನ ತಾಳಮದ್ದಳೆ, ಏ.1ರಂದು ರಾತ್ರಿ 7.30 ರಿಂದ ಬಜಕೂಡ್ಲು  ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಏ. 2ರಂದು ಮಧ್ಯಾಹ್ನ 1.30ರಿಂದ ಶ್ರೀ ಶಾಸ್ತಾ ಮ್ಯೂಸಿಕಲ್ಸ್, ಪೆರ್ಲ - ಇವರಿಂದ ಭಕ್ತಿಸಂಗೀತ ಕಾರ್ಯಕ್ರಮ ನಡೆಯಲಿದೆ.

Post a Comment

0 Comments