ಸಾಂದರ್ಭಿಕ ಚಿತ್ರ
ಬದಿಯಡ್ಕ : ಮುಗು, ಚೇವಾ ತರವಾಡು ಮನೆಯ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕದಲ್ಲಿ ತೊಡಗಿದ್ದ ಐದು ಮಂದಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಂಜೇಶ್ವರದ ಯತೀಶ್ (36), ಬಾಬು ರೈ (70), ಸುಧಾಕರ ರೈ (48), ನಾರಾಯಣ (42) ಮತ್ತು ಮುಗು ಚೇವಾ ನಿವಾಸಿ ಗಣೇಶ್ ರೈ (40) ಎಂದು ಗುರುತಿಸಲಾಗಿದೆ.
ಮುಗು ಸಮೀಪದ ಚೇವಾದಲ್ಲಿ ಹಣದ ಬೆಟ್ಟಿಂಗ್‌ನೊಂದಿಗೆ ಕೋಳಿ ಅಂಕ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬದಿಯಡ್ಕ ಠಾಣಾ ಎಸ್‌ಐ ಸುಕುಮಾರನ್ ನೇತೃತ್ವದಲ್ಲಿ ನಿನ್ನೆ (ಸೋಮವಾರ) ಸಂಜೆ 5 ಗಂಟೆ ಸುಮಾರಿಗೆ ದಾಳಿ ನಡೆದಿತ್ತು. ಪೊಲೀಸ್ ತಂಡವನ್ನು ನೋಡಿ ಕೆಲವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

0 Comments