ಕಾಸರಗೋಡು : ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಅಖಿಲ ಕೇರಳ ಛಾಯಾಗ್ರಾಹಕರ ಸಂಘ ಕಾಸರಗೋಡು ಪೂರ್ವ ಘಟಕವು ಕಳೆದ 9 ವರ್ಷಗಳಿಂದ ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಚಟುವಟಿಕೆಗಳಲ್ಲಿ ನಿಸ್ವಾರ್ಥ ಸೇವೆಯೊಂದಿಗೆ ಹರಿತ ಕರ್ಮ ಸೇನೆಗೆ ಸೇವೆ ಸಲ್ಲಿಸುತ್ತಿರುವ ಗಾಯತ್ರಿ ಕಿಣಿ ಅವರನ್ನು ಅಭಿನಂದಿಸಿತು.
ಪೂರ್ವ ಘಟಕದ ಅಧ್ಯಕ್ಷ ರಾಜಶೇಖರ ಅವರು ಗಾಯತ್ರಿ ಕಿಣಿ ಅವರಿಗೆ ಚಿನ್ನದ ಪದಕ ನೀಡಿ ಸನ್ಮಾನಿಸಿದರು, ಕಾರ್ಯದರ್ಶಿ ಅಖಿಲ್ ಎ.ಎಸ್.ಕೆ, ಖಜಾಂಚಿ ಶ್ರೀಕಾಂತ್, ರಾಜ್ಯ ಸಮಿತಿ ಸದಸ್ಯ ರಾಜೇಂದ್ರನ್, ಜಿಲ್ಲಾ ಸಮಿತಿ ಸದಸ್ಯ ಸಂಜೀವ್ ರೈ, ಪ್ರಾದೇಶಿಕ ಖಜಾಂಚಿ ಅಜಿತ್ ಕುಮಾರ್, ಮತ್ತು ಘಟಕ ಸದಸ್ಯರಾದ ಫೈಸಲ್ ಮತ್ತು ಸುರೇಶ್ ಬಿ.ಜೆ ಉಪಸ್ಥಿತರಿದ್ದರು.

0 Comments