Ticker

6/recent/ticker-posts

Ad Code

ಪೆರ್ಲ ವಿವೇಕಾನಂದ ಶಿಶುಮಂದಿರ, ಸೆಂಟ್ರಲ್ ಸ್ಕೂಲ್ ವಾರ್ಷಿಕೋತ್ಸವ

 

ಪೆರ್ಲ: ಪೆರ್ಲ ವಿವೇಕಾನಂದ ಶಿಶುಮಂದಿರ ಹಾಗೂ ಸೆಂಟ್ರಲ್ ಸ್ಕೂಲ್ ವಾರ್ಷಿಕೋತ್ಸವ ನಾಲಂದ ಕಾಲೇಜು ಸಭಾಂಗಣದಲ್ಲಿ ನಾನಾ ಕಾರ್ಯಕ್ರಮಗಳೊಂದಿಗೆ ನಡೆಯಿತು‌. ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲು ನಿವೃತ್ತ ಮುಖ್ಯ ಶಿಕ್ಷಕ ರಾಜೇಂದ್ರ ಬಜಕುಡ್ಲು ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಗೌರವ ಸಲಹೆಗಾರ ದಯಾನಂದ ಕೆ.ಆರ್. ಅಧ್ಯಕ್ಷತೆ ವಹಿಸಿದರು. ಶಿಕ್ಷಕಿ ಪ್ರಮಾಥಿ ದೇವಧರ್ ಸೆಂಟ್ರಲ್ ಸ್ಕೂಲ್ ಹಾಗೂ ಶಿಕ್ಷಕಿ ರೇಖಾ  ಶಿಶುಮಂದಿರದ ವರದಿ ಮಂಡಿಸಿದರು.

ಶಿಶುಮಂದಿರದ ಅಧ್ಯಕ್ಷೆ ನಳಿನಿ ಸೈಪಂಗಲ್ಲು ಸ್ವಾಗತಿಸಿದರು. ಶಿಕ್ಷಕಿ ಸುನಿತಾ ವಂದಿಸಿದರು. ಅಶ್ವಿತ ನಿರೂಪಿಸಿದರು. ಮಕ್ಕಳು ಮತ್ತು ಪೋಷಕರಿಗಾಗಿ ಆಯೋಜಿಸಲಾದ ಸ್ಪರ್ಧೆಗಳ ಬಹುಮಾನ ವಿತರಿಸಲಾಯಿತು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Post a Comment

0 Comments