Ticker

6/recent/ticker-posts

Ad Code

ಚುನಾವಣಾ ಆವೇಶದ ನಡುವೆಯೂ ಮಂಜೇಶ್ವರದಲ್ಲಿ ಮುಂದುವರಿದ ಆಪರೇಶನ್ ಹಸ್ತ


ಎಸ್ ಡಿಪಿ ತೊರೆದು ಕಾಂಗ್ರೆಸ್ ಗೆ ಸೇರಿದ ಮನ್ಸೂರ್ ಆಲಿ ಕಂಡತ್ತಿಲ್ ಗೆ ಉಜ್ವಲ ಸ್ವಾಗತ

ಮಂಜೇಶ್ವರ: ಕಾಂಗ್ರೆಸ್ ನ ಜಾತ್ಯಾತೀತ ರಾಜಕೀಯ ನೀತಿಗೆ ಮಾರು ಹೋಗಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆಯೇ ಹಲವರು ಅನ್ಯ ಪಕ್ಷ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದು ಇದೀಗ ಚುನಾವಣೆಯ ಆವೇಶದ ನಡುವೆಯೂ  ಎಸ್ ಡಿಪಿ ಕಾರ್ಯಕರ್ತನೋರ್ವ ಕಾಂಗ್ರೆಸ್ ಗೆ ಸೇರ್ಪಡಿಸುವ ಮೂಲಕ ಆಪರೇಶನ್ ಹಸ್ತ ಮುಂದುವರಿಯುವುದಾಗಿ ತಿಳಿದು ಬಂದಿದೆ.   

ಎಸ್ ಡಿಪಿಐ ನಾಯಕ ಮನ್ಸೂರ್ ಆಲಿ ಕಂಡತ್ತಿಲ್ ಇಂದು ಸಂಜೆ ಪಕ್ಷದ  ಸ್ಥಾನಮಾನಕ್ಕೆ ರಾಜೀನಾಮೆ ಸಲ್ಲಿಸಿ, ಕಾಂಗ್ರೆಸ್ ಗೆ ಸೇರ್ಪಡೆಗೊಂಡರು.

ಈ ಹಿಂದೆ ಕಾಂಗ್ರೆಸ್ ಕಾರ್ಯಕರ್ತನಾಗಿದ್ದ ಮನ್ಸೂರ್ ಆಲಿ ಎಸ್ ಡಿಪಿಐ ಕಾರ್ಯಕರ್ತನಾಗಿ ಪಕ್ಷದ ಸ್ಥಾನ ಗಳಿಸಿಕೊಂಡಿದ್ದರು. ಇದೀಗ ಈ ಬಾರಿ ಮಂಜೇಶ್ವರ ವಿಧಾನ ಸಭೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬಳಿಕ ನಾಮ‌ಪತ್ರ ಹಿಂತೆಗೆದುಕೊಂಡ ವಿಷಯ ಪಕ್ಷದೊಳಗೆ ಅಂತರಿಕ ಚರ್ಚೆಗೆ ಆಸ್ಪದವಾಗಿದ್ದು ಪ್ರಮುಖ ಕಾರ್ಯಕರ್ತನೋರ್ವ ಪಕ್ಷ ಬಿಟ್ಟು ಕಾಂಗ್ರೆಸ್ ಗೆ ಸೇರಿರುವುದು ಎಸ್ ಡಿಪಿಐಗೆ ತಲ್ಲಣ ಸೃಷ್ಟಿಸಿದೆ.

ವರ್ಕಾಡಿಯಲ್ಲಿ ನಡೆದ ಯುಡಿಎಫ್ ಚುನಾವಣಾ ಸಮಾವೇಶದ ವೇಳೆ, ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ಸಮ್ಮುಖ ಮನ್ಸೂರ್ ಆಲಿ ಅವರನ್ನು ಕಾಂಗ್ರೆಸ್ ಗೆ ಸೇರ್ಪಡೆಗೊಳಿಸಲಾಯಿತು. ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ. ಎಸ್. ಅವರಿಗೆ ತ್ರಿವರ್ಣ ಶಾಲು ಹಾಕಿ ಕಾಂಗ್ರೆಸ್ ಗೆ ಬರಮಾಡಿಕೊಂಡರು. ಈ ಸಂದರ್ಭ. ಡಿಸಿಸಿ ಕಾರ್ಯದರ್ಶಿ ಡಿಎಂಕೆ ಮುಹ್ಮದ್ ಸಹಿತ ಪ್ರಮುಖ ಯುಡಿಎಫ್ ನಾಯಕರು ಉಪಸ್ಥಿತರಿದ್ದರು.

Post a Comment

0 Comments