ಕುಂಬಳೆ: ಎನ್‌ಡಿಎ ಮಂಜೇಶ್ವರ ಕ್ಷೇತ್ರದ ಅಭ್ಯರ್ಥಿ ಕೆ. ಸುರೇಂದ್ರನ್ ಮತ್ತು ತಿರುವನಂತಪುರಂ ಮೇಯರ್ ವಿ.ವಿ. ರಾಜೇಶ್ ನೇತೃತ್ವದ ರೋಡ್ ಶೋ ಕುಂಬಳೆ ನಗರದಲ್ಲಿ ನೆರೆದ ಕಾರ್ಯಕರ್ತರಿಗೆ ಆವೇಶೋಜ್ವಲ ಸೃಷ್ಠಿಸಿತು. ಕೆ. ಸುರೇಂದ್ರನ್ ಮತ್ತು ವಿ.ವಿ. ರಾಜೇಶ್ ಅವರ ಚಿತ್ರಗಳನ್ನು ಹೊಂದಿರುವ ಫಲಕಗಳೊಂದಿಗೆ ಕಾರ್ಯಕರ್ತರು ಸಾಲುಗಟ್ಟಿ ಸಾಗಿ ಬಂದ ರೋಡ್ ಶೋನಲ್ಲಿ ಮಹಿಳಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಗಮನಾರ್ಹವಾಗಿತ್ತು. ಕುಂಬಳೆ ಗೋಪಾಲಕೃಷ್ಣ ದೇವಸ್ಥಾನದ ಆವರಣದಿಂದ ಪ್ರಾರಂಭವಾದ ರೋಡ್ ಶೋ ನಗರವನ್ನು ಸುತ್ತಿ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಕೊನೆಗೊಂಡಿದ್ದು, ಕುಂಬಳೆ ಪಂಚಾಯತ್‌ನಲ್ಲಿ ಎನ್‌ಡಿಎಯ ಶಕ್ತಿ ಪ್ರದರ್ಶನವಾಗಿ ಮಾರ್ಪಟ್ಟಿತು. ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ಸುರೇಶ್ ಕುಮಾರ್ ಶೆಟ್ಟಿ, ವಿ. ರವೀಂದ್ರನ್, ಸತೀಶ್ ಕುಂಬಳೆ, ಪ್ರೇಮಲತಾ ಗಟ್ಟಿ ಮತ್ತು ಸುನಿಲ್ ಅನಂತಪುರ ರೋಡ್ ಶೋದ ನೇತೃತ್ವ ವಹಿಸಿದ್ದರು.

0 Comments