ಕಾಸರಗೋಡು : ಬ್ರಹ್ಮಕಲಶೋತ್ಸವ ಸಂಬಂಧಿ ಚಟುವಟಿಕೆಗಳು ನಡೆಯುತ್ತಿರುವ ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಬುಧವಾರ ಪ್ರಧಾನ ಆರಾಧನಾ ಮೂರ್ತಿಯಾಗಿರುವ ಶ್ರೀದೇವಿಯ ಪ್ರತಿಷ್ಠೆ ನಡೆಯಿತು. ತಂತ್ರಿವರ್ಯ ಶ್ರೀ ಶ್ರೀ ಕೃಷ್ಣ ಗುರೂಜಿ ಕುಕ್ಕಾಜೆ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಗಣಪತಿ ಹೋಮ, ಪ್ರತಿಷ್ಠಾಂಗ ಹೋಮ, ಶಿಖರ ಪೂಜೆ, ಜೀವಕಲಶ ಪೂಜೆ, ಜೀವಕಲಾಭಿಷೇಕ, ಮಹಾಪೂಜೆ, ಕವಾಟಬಂಧನ ಇತ್ಯಾದಿ ನಡೆದುವು.
ದೇವಾಲಯದ ಮೊಕ್ತೇಸರ ಅಚ್ಯುತ ಕಾಳ್ಯಂಗಾಡು, ಧರ್ಮದರ್ಶಿ ನಾರಾಯಣ ಕಾಳ್ಯಂಗಾಡು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ದಯಾನಂದ ಕೊಳ್ಕೇಬೈಲು, ಕಾರ್ಯದರ್ಶಿಗಳಾದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿಗಳಾದ ರಂಜಿತ್ ಮನ್ನಿಪ್ಪಾಡಿ, ಗೋವಿಂದ ನಾಯ್ಕ್ ಕಾಳ್ಯಂಗಾಡು, ಕೋಶಾಧಿಕಾರಿ ಶಾಂತ ಕುಮಾರ್, ಜತೆ ಕಾರ್ಯದರ್ಶಿ ಪುನೀತ್ ಕೆಮ್ಮಣ್ಣು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನರಾಜ್ ಕಾಳ್ಯಂಗಾಡು, ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್, ರಘು ಮೀಪುಗಿರಿ ಮೊದಲಾದವರು ಉಪಸ್ಥಿತರಿದ್ದರು. ನಾಳೆ ಏ.30ಕ್ಕೆ ಬೆಳಗ್ಗೆ 9.30ಗಂಟೆಯಿಂದ ಬಹ್ಮಕಲಶಾಭಿಷೇಕ, ನಿತ್ಯ ನೈಮಿತ್ತಿಕ ನಿರ್ಣಯ ಕಾರ್ಯಕ್ರಮ ಜರಗಲಿದೆ.

0 Comments