ಕಾಸರಗೋಡು : ಬಿಸಿಲ ಅಘಾತ ದಿನೇ ದಿನೇ ಏರುತ್ತಿದ್ದು ಕಾಞಂಗಾಡು ನಗರಸಭೆ ಸದಸ್ಯ ಎನ್. ಉನ್ನಿಕೃಷ್ಣನ್ ಅವರಿಗೆ ಬಿಸಿಲಿನ ಹೊಡೆತ ತಗುಲಿ ದೇಹದಾದ್ಯಂತ ಸುಟ್ಟ ಗಾಯಗಳಾಗಿವೆ. ಅವರನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಞಂಗಾಡ್ ಪೇಟೆಯಲ್ಲಿ ಬೈಕ್ ಸವಾರಿ ಮಾಡುವಾಗ ಅವರಿಗೆ ತೀವ್ರವಾದ ಸೂರ್ಯಘಾತವಾಗಿ ಕುತ್ತಿಗೆಯ ಕೆಳಗೆ ಮತ್ತು ದೇಹದ ಮುಂಭಾಗ ಮತ್ತು ಹಿಂಭಾಗದಲ್ಲಿ ಸುಟ್ಟ ಗಾಯಗಳಾಗಿವೆ. ಅವರು ಪುರಸಭೆಯ 19 ನೇ ವಾರ್ಡ್ ಕೌನ್ಸಿಲರ್ ಆಗಿದ್ದಾರೆ.

0 Comments