ಕಾಸರಗೋಡು : ಮನೆ ಸಮೀಪ ಆಟವಾಡುತ್ತಿರುವಾಗ ವಿಷಪೂರಿತ ಹಾವಿನ ಕಡಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕೂವರೆ ವರ್ಷದ ಬಾಲಕಿ ಮೃತಪಟ್ಟ ಘಟನೆ ವೆಲ್ಲರಿಕುಂಡ್‌ನಲ್ಲಿ ನಡೆದಿದೆ.
ಪುಟಾಣಿ ಬಾಲಕಿ ಎಲೆರಿತ್ತಟ್ಟುವಿನ ಶರತ್ ಮತ್ತು ಅಜಿತಾ ದಂಪತಿಯ ಪುತ್ರಿ ರಿತು ಚಂದ್ರ ಎಂಬವಳಾಗಿದ್ದಾಳೆ. ಕಳೆದ ದಿನ ಆಟವಾಡುವಾಗ ಚೆಂಡನ್ನು ಎತ್ತಿಕೊಳ್ಳಲು ಹೋದಾಗ ಮಗುವಿಗೆ ನಾಗರಹಾವು ಕಚ್ಚಿದೆ. ನಂತರ ಮಗುವಿಗೆ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ನೀಡಲಾಗಿತ್ತು.ಇದೀಗ ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ.

0 Comments