Ticker

6/recent/ticker-posts

Ad Code

ಕರಾಟೆಯಲ್ಲಿ ಸಾಧನೆಗೈದ ನೀರ್ಚಾಲಿನ ಅಂಕಿತ್ ಗೆ ಸೆಕೆಂಡ್ ಡಾನ್ ಪದವಿ ಪ್ರದಾನ


ಬದಿಯಡ್ಕ : ತೃಶ್ಯೂರಿನ ದೇವಮಾತ ಪಬ್ಲಿಕ್ ಶಾಲೆಯಲ್ಲಿ ನಡೆದ ರಾಜ್ಯ ಕರಾಟೆ ಕ್ಯಾಂಪ್ ಮತ್ತು ಬೆಲ್ಟ್ ಪ್ರದಾನ ಕಾರ್ಯಕ್ರಮದಲ್ಲಿ ನೀರ್ಚಾಲಿನ ಅಂಕಿತ್.ಆರ್ ಇವರು ಸೆಕೆಂಡ್ ಡಾನ್ ಪದವಿನ್ನು ಪಡೆದುಕೊಂಡಿದ್ದಾರೆ. ಇವರು ಮೊದಲಿಗೆ ವಾರಿಯರ್ಸ್ ಕರಾಟೆ ಅಕಾಡೆಮಿ ನೀರ್ಚಾಲ್ ಸೆನ್ಸೈ  ಸೌಮ್ಯ ಯನ್. ಚೆಂಬ್ರಕಾನ ಇವರಲ್ಲಿ ತರಬೇತಿ  ಪಡೆದುಕೊಂಡಿದ್ದು, ತದನಂತರ  ಸೀತಾಂಗೋಳಿಯ ಕರಾಟೆ & ಫಿಟ್ನೆಸ್ ಟ್ಯುಟೋರಿಯಲ್ ನ ಸೆನ್ಸೈ ಅಶ್ರಫ್  ಇವರಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. 
ಇದೀಗ  ಸೆನ್ಸೈ  ಪಿ.ಕೆ ಆನಂದ್ ವರ ಮಾರ್ಗದರ್ಶನದಲ್ಲಿ  ನೀಡಾನ್ ಸೆಕೆಂಡ್ ಡಾನ್ ಪದವಿ ಪಡೆದಿರುವರು. ನೀರ್ಚಾಲ್ ಮಹಾಜನ ಸಂಸ್ಕೃತ ಹೈಯರ್ ಸೆಕೆಂಡರಿ ಶಾಲೆ ವಿದ್ಯಾರ್ಥಿಯಾಗಿದ್ದು, ನೀರ್ಚಾಲಿನ ವ್ಯಾಪಾರಿ ರವಿ ಖಂಡಿಗೆ ಹಾಗೂ ಮಹಾಜನ ಸಂಸ್ಕೃತ ಹೈಯರ್ ಸೆಕೆಂಡರಿ ಶಾಲೆ ಶಿಕ್ಷಕಿ ಸರಿತಾ ದಂಪತಿಯ ಪುತ್ರ. ಇವರ ಸಾಧನೆಗೆ ಸೀತಾಂಗೋಳಿಯ ಕರಾಟೆ & ಫಿಟ್ನೆಸ್ ಟ್ಯುಟೋರಿಯಲ್ ನ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ. 

Post a Comment

0 Comments