Ticker

6/recent/ticker-posts

Ad Code

ನಿವೃತ್ತಿಗೊಂಡ ಉತ್ತಮ ಅಂಗನವಾಡಿ ಕಾರ್ಯಕರ್ತೆ ರಾಜ್ಯ ಪ್ರಶಸ್ತಿ ಪುರಸ್ಕೃತ ವಿಶಾಲಾಕ್ಷಿ ಪೂಂಜ ಅಡೆಕಳಕಟ್ಟೆಯವರಿಗೆ ಬೀಳ್ಕೊಡುಗೆ

ಮಂಜೇಶ್ಚರ : ಕಳೆದ ಹಲವಾರು ವರುಷಗಳಿಂದ ದೈಗೋಳಿ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯಾಗಿ, ಹಲವಾರು ಶಿಷ್ಯಂದಿರ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ಜನಮನ್ನಣೆಯನ್ನು ಪಡೆದು ನಿವೃತ್ತರಾಗುತ್ತಿರುವ 'ಉತ್ತಮ  ಅಂಗನವಾಡಿ ಕಾರ್ಯಕರ್ತೆ ರಾಜ್ಯ ಪ್ರಶಸ್ತಿ' ಪುರಸ್ಕೃತೆ,  ಕೇಂದ್ರ ಸರಕಾರದ ಗಣರಾಜ್ಯ ಕಾರ್ಯಕ್ರಮಕ್ಕೆ ವಿಶೇಷ ಅಹ್ವಾನಿತೆ,  ವಿಶಾಲಾಕ್ಷಿ ಪೂಂಜ ಅಡೆಕಳಕಟ್ಟೆ ಅವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಅಂಗನವಾಡಿ ಪುಟಾಣಿಗಳ ನೃತ್ಯ ಕಾರ್ಯಕ್ರಮವು ಸಾರ್ವಜನಿಕ ಸನ್ಮಾನ ಸಮಿತಿ ದೈಗೋಳಿ ಇದರ ಸಾರಥ್ಯದಲ್ಲಿ ಜ್ಞಾನೋದಯ ಸಮಾಜದ ಗಣೇಶ ಮಂದಿರದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಕೋಳ್ಯೂರು ವಾರ್ಡಿನ ಸದಸ್ಯರೂ, ಸಾರ್ವಜನಿಕ ಸನ್ಮಾನ ಸಮಿತಿಯ ಅಧ್ಯಕ್ಷರಾದ  ಶಾಂತ ಕುಮಾರಿ ಬಿ ಅವರು ವಹಿಸಿದ್ದರು. ಮಂಜೇಶ್ವರ ಬ್ಲೋಕ್ ಸದಸ್ಯರೂ, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷರಾದ  ಮೋಹನ್ ರೈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮೀಂಜ ಪಂಚಾಯತಿನ ಮಾಜಿ ಉಪಾಧ್ಯಕ್ಷ  ತಿಮ್ಮಣ್ಣ ಭಟ್ ಕೊಮ್ಮೆ, ಮೀಂಜ ಗ್ರಾಮ ಪಂಚಾಯತ್ ಸದಸ್ಯೆ ಆಶಾಲತ ಬಿ ಯಂ, ಜ್ಞಾನೋದಯ ಸಮಾಜದ ಸದಸ್ಯ ಬಿ ವಿ ಸುರೇಶ್ , ಮೀಂಜ ಅಂಗನವಾಡಿ ಮೇಲ್ವಿಚಾರಕಿಯಾದ  ಬಿಂದು, ವರ್ಕಾಡಿ ಪಂಚಾಯತಿನ ಮಾಜಿ ಸದಸ್ಯೆ  ಮಮತ ಶೇಖರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ವಿಶಾಲಾಕ್ಷಿ ಪೂಂಜ ಅವರಿಗೆ ಶಾಲು ಹೊದೆಸಿ, ಫಲಪುಷ್ಪ ಸಹಿತ ಸನ್ಮಾನ ಪತ್ರ ಹಾಗೂ ಗೌರವ ಕಾಣಿಕೆಯ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ  ವಿಶಾಲಾಕ್ಷಿ ಪೂಂಜ ತಮ್ಮ ಅನುಭವದ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ  ಶಿಷ್ಯ ಗಣದಿಂದ ನೆಚ್ಚಿನ ಶಿಕ್ಷಕಿಗೆ ನೆನಪಿನ ಕಾಣಿಕೆಯನ್ನು  ನೀಡಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯರುಗಳಾದ ವೆಂಕಟೇಶ್ವರ ಭಟ್  ಬಜೆ, ಸುಂದರ ಮಾಸ್ಟರ್ ಚಿತ್ತರಂಜನ್ ದೈಗೋಳಿ,  ಶಿವರಾಮ ಭಟ್  ಅಧ್ಯಕ್ಷ ಜ್ಞಾನೋದಯ ಸಮಾಜ, ಕೋಳ್ಯೂರು ವಾರ್ಡಿನ ಮಾಜಿ ಸದಸ್ಯ  ನಾರಾಯಣ ತುಂಗ, ಮೀಂಜ  ಗ್ರಾಮ ಪಂಚಾಯತ್ ನ ಅಕೌಂಟೆಂಟ್  ಜಮಾಲುದ್ದೀನ್,  ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ತಿಲಕ ಪ್ರಸಾದ್, ಮೊದಲಾದವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಾರ್ವಜನಿಕ ಸನ್ಮಾನ ಸಮಿತಿಯ ಕೋಶಾಧಿಕಾರಿಯಾದ ಪದ್ಮನಾಭ ಮಾಸ್ಟರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸತ್ಯನಾರಾಯಣ ಭಟ್ ಪಜ್ವ ದೈಗೋಳಿ ಸ್ವಾಗತಿಸಿ, ಮಾಧವ ಶೆಟ್ಟಿಗಾರ್ ದೈಗೋಳಿ ವಂದಿಸಿದರು. ಮೀಯಪದವು ಶಾಲಾ ಅಧ್ಯಾಪಕ  ಸುನಿಲ್ ಮಾಸ್ಟರ್ ಕಾರ್ಯಕ್ರಮವನ್ನು ನಿರೂಪಿಸಿದರು. 

ನಂತರ ಅಂಗನವಾಡಿಯ ಪುಟಾಣಿಗಳಿಂದ ಹಾಗೂ ಹಳೆವಿದ್ಯಾರ್ಥಿಗಳಿಂದ ನೃತ್ಯ ಸಿಂಚನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸೇರಿದ ಎಲ್ಲರಿಗೂ ನಿವೃತ್ತ ಅಧ್ಯಾಪಕ ಸುಬ್ಬಣ್ಣ ಭಟ್ ಅವರ ನೇತೃತ್ವದಲ್ಲಿ  ಲಘು ಉಪಾಹಾರ ವಿತರಿಸಲಾಯಿತು.

Post a Comment

0 Comments