Ticker

6/recent/ticker-posts

Ad Code

ನೆಲ್ಲಿಕಾಯಿ ನುಂಗಿ 2 ವರ್ಷದ ಮಗು ಮೃತ್ಯು

 

ಕೋಲಾರ : ನೆಲ್ಲಿಕಾಯಿ ಗಂಟಲಲ್ಲಿ ಸಿಲುಕಿ ಎರಡು ವರ್ಷದ ಮಗು ಸಾವನ್ನಪ್ಪಿದ ಪ್ರಕರಣ  ಕೋಲಾರದಲ್ಲಿ  ನಡೆದಿದೆ. ಕೋಲಾರ ಜಿಲ್ಲೆ ಮಾಲೂರು ಪಟ್ಟದ ಗಾಂಧಿ ಸರ್ಕಲ್‌ನಲ್ಲಿ ಈ ಘಟನೆ ನಡೆದಿದ್ದು, ರವಿ ಹಾಗೂ ಮಾಲಾ ದಂಪತಿಯ ಎರಡು ವರ್ಷದ ಗಂಡು ಮಗು ವಿಜಯೇಂದ್ರ ಮೃತ ದುರ್ದೈವಿ ಬಾಲಕ. 

ಆಟವಾಡುವ ನಡುವೆ  ಮಗು ಬೆಟ್ಟದ ನೆಲ್ಲಿಕಾಯಿ ನುಂಗಿದ್ದು  ಅದು ಗಂಟಲಲ್ಲಿ ಸಿಲುಕಿಕೊಂಡಿದೆ. ಪರಿಣಾಮ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗಂಟಲಲ್ಲಿ ಸಿಲುಕಿದ್ದ ನೆಲ್ಲಿಕಾಯಿ ಹೊರ ತೆಗೆಯಲಾಗದೇ ಮಗು ಸಾವನ್ನಪ್ಪಿದೆ.

Post a Comment

0 Comments