Ticker

6/recent/ticker-posts

Ad Code

ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ

ಬಂದಡ್ಕ : ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಬಂದಡ್ಕ ಪ್ಲಾಟಿನಂ ಜುಬಿಲಿ ಅಂಗವಾಗಿ ಹಳೆಯ ವಿದ್ಯಾರ್ಥಿಗಳ ಸಂಗಮ ಆಯೋಜಿಸಲಾಯಿತು. ಶಾಲಾ  ಹಳೆವಿದ್ಯಾರ್ಥಿ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಶಂಕರನ್ ನಾಯರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಬಲರಾಮನ್ ನಂಬಿಯಾರ್ ಅಧ್ಯಕ್ಷತೆ ವಹಿಸಿದ್ದರು. ಜುಬಿಲಿ ಕಾರ್ಯಾಧ್ಯಕ್ಷ ಪಿ.ವಿ. ಸುರೇಶ್, ನಿವೃತ್ತ ತಹಸೀಲ್ದಾರ್ ರಾಧಾಕೃಷ್ಣನ್ ನಾಯರ್, ಜೋಸ್ ಪರತಟ್ಟೆಲ್, ರಾಧಾಕೃಷ್ಣನ್ ನಂಬಿಯಾರ್, ಕೃಷ್ಣನ್ ಮೇಲತ್, ರಾಧಾಕೃಷ್ಣನ್ ಎ ಕೆ ಶಾಲಾ ಮುಖ್ಯೋಪಾಧ್ಯಾಯ ರಾಘವ ಎನ್. ಎಂ, ವೇಣುಗೋಪಾಲನ್ ಮಾಸ್ಟರ್, ಗೋಪಿ ಮಾಣಿಮೂಲೆ ಉಪಸ್ಥಿತರಿದ್ದರು. ಸಂಚಾಲಕ ರಜಾಕ್ ಕೆ ಎ ಸ್ವಾಗತಿಸಿ, ಕಾರ್ಯದರ್ಶಿ ಜ್ಯೋತಿಲಕ್ಷ್ಮಿ ಕೆ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ನೂತನ ಹಳೆ ವಿದ್ಯಾರ್ಥಿ ಸಮಿತಿಯ ಅಧ್ಯಕ್ಷರಾಗಿ ಬಲರಾಮ ನಂಬಿಯಾರ್ ಮತ್ತು ಸಂಚಾಲಕರಾಗಿ ಕೆ.ಎ. ರಜಾಕ್ ಅವರನ್ನು ಆಯ್ಕೆ ಮಾಡಲಾಯಿತು

Post a Comment

0 Comments