ತಿರುವನಂತಪುರ : ಈದ್-ಉಲ್-ಫಿತರ್ ಅಂಗವಾಗಿ ಕೇರಳದಲ್ಲಿ ಎರಡು ದಿನಗಳ ರಜೆ ಘೋಷಿಸಲಾಗಿದೆ. ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳಿಗೆ ಮೇ 27 ಮತ್ತು 28 ರಂದು ರಜೆ ನೀಡಲಾಗುವುದು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ. ಈ ಹಿಂದೆ ಮೇ 27 ಕ್ಕೆ ರಜೆ ಎಂದು ನಿಗದಿಪಡಿಸಲಾಗಿತ್ತು. ಚಂದ್ರನ ದರ್ಶನವಾಗದ ಕಾರಣ ಕೇರಳದಲ್ಲಿ ಮೇ 28 ರಂದು ಈದ್-ಉಲ್-ಫಿತರ್ ಇದೆ. ಈ ಹಿನ್ನೆಲೆಯಲ್ಲಿ ಮೇ 28 ರಂದು ಸಾರ್ವಜನಿಕ ರಜೆ ಘೋಷಿಸಿ ಆದೇಶ ಹೊರಡಿಸಲಾಗಿದೆ.

0 Comments