Ticker

6/recent/ticker-posts

Ad Code

ದಂಪತಿಗಳು ಬೈಕ್ ನಲ್ಲಿ ತೆರಳುತ್ತಿದ್ದಾಗ ಕಾಡಾನೆ ದಾಳಿ: ಮಹಿಳೆ ಮೃತ್ಯು

 

ಮಾನಂತವಾಡಿ : ಕಾಡಾನೆ  ದಾಳಿಗೆ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣ ವಯನಾಡಿನ ಮೆಪ್ಪಾಡಿಯಲ್ಲಿ ನಡೆದಿದೆ. ಮೃತರು ಕಾಶ್ಮೀರ ಮೂಲದ ಶಾಜಿ ಎಂಬವರ ಪತ್ನಿ ಕಲಾ ಯಾನೆ ಜೆಸ್ಸಿ ಎಂದು ಗುರುತಿಸಲಾಗಿದೆ.  ಅವರು ಪತಿ ಶಾಜಿ ಅವರೊಂದಿಗೆ ಬೈಕ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ದಾಳಿಯಲ್ಲಿ ಶಾಜಿ ಕೂಡ ಗಾಯಗೊಂಡಿದ್ದಾರೆ. ಕಾಡಾನೆ ದಾಳಿಗೆ ಮಹಿಳೆ ಬಲಿಯಾದ ಬಳಿಕ ಮೆಪ್ಪಾಡಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ.  ಕಾಡಾನೆಗಳು ಜನವಸತಿ ಪ್ರದೇಶಗಳಿಗೆ ಪ್ರವೇಶಿಸುವುದನ್ನು ತಡೆಯಬೇಕೆಂಬ ಬೇಡಿಕೆ ಇರಿಸಲಾಗಿದೆ. ಮಹಿಳೆಯರು ರಸ್ತೆಯಲ್ಲಿ ಕುಳಿತು ಪ್ರತಿಭಟನಾ ನಿರತರಾಗಿದ್ದಾರೆ. 

ಮೃತರ ಕುಟುಂಬಕ್ಕೆ ಇಂದು ತುರ್ತು ಆರ್ಥಿಕ ಸಹಾಯವಾಗಿ 5 ಲಕ್ಷ ರೂ.ಗಳನ್ನು ಹಸ್ತಾಂತರಿಸಲಾಗುವುದು. ಕುಟುಂಬದ ಅವಲಂಬಿತರಲ್ಲಿ ಒಬ್ಬರಿಗೆ ತಾತ್ಕಾಲಿಕ ಕೆಲಸ ನೀಡಲಾಗುವುದು ಮತ್ತು ಆ ಪ್ರದೇಶದಲ್ಲಿ ಕಾಡು ಆನೆಯನ್ನು ಓಡಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಡಿಎಫ್ ಒ ಆಶಿಕ್ ಅಲಿ ಹೇಳಿದರು. ಈ ಪ್ರದೇಶದಲ್ಲಿ  ಕಾಡಾನೆಯನ್ನು ಓಡಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ಬೇಲಿ ಸೇರಿದಂತೆ ವನ್ಯಜೀವಿ ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸಲಾಗುವುದು ಎಂದು ಡಿಎಫ್‌ಒ ಹೇಳಿದರು.  ಘಟನೆಯ ಬಗ್ಗೆ  ಅರಣ್ಯ ಸಚಿವ ಶಿಬು ಬೇಬಿ ಜಾನ್   ಕಾಡಾನೆ  ದಾಳಿಯ ಕುರಿತು ಎರಡು ವಾರಗಳಲ್ಲಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ಆದೇಶಿಸಿದ್ದಾರೆ.

Post a Comment

0 Comments