Ticker

6/recent/ticker-posts

Ad Code

ಬದಿಯಡ್ಕದಲ್ಲಿ ಎಲೈಟ್ ಏಕದಿನ ವ್ಯಕ್ತಿತ್ವ ವಿಕಸನ ಶಿಬಿರ

 

ಬದಿಯಡ್ಕ : ಎಲೈಟ್ ಆಕಾಡೆಮಿ ಬದಿಯಡ್ಕ ಮತ್ತು ರೂಟ್ರೋನಿಕ್ಸ್ ಕಂಪ್ಯೂಟರ್ ಸೆಂಟರ್ ಬದಿಯಡ್ಕ ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಎಲೈಟ್  ವ್ಯಕ್ತಿತ್ವ ವಿಕಸನ ಶಿಬಿರ ಎಂಬ ಏಕದಿನ ಕಾರ್ಯಾಗಾರ ಬದಿಯಡ್ಕದ ರಾಮ್ ಲೀಲಾ ಸಭಾಂಗಣದಲ್ಲಿ ಜರಗಿತು. ಬದಿಯಡ್ಕ ಪಂಚಾಯತು ಸದಸ್ಯ ಹಮೀದ್ ಕೆಡೆಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಮಕ್ಕಳ ಜೀವನಕ್ಕೆ ಪೂರಕವಾದ ಶಿಕ್ಷಣದ ಜತೆಗೆ ಔದ್ಯೋಗಿಕ ನೆಲೆಯಲ್ಲಿ ಸಹಕಾರವಾಗುವ ಇಂತಹ ವ್ಯಕ್ತಿತ್ವ ವಿಕಸನ‌ ಸೂತ್ರಗಳನ್ನು ಕಲಿಸುವ ಕಾರ್ಯಾಗಾರ ಬದುಕಿನ ಸಿದ್ಧ ಸೂತ್ರಗಳಿಗೆ ಮುನ್ನುಡಿಯಾಗಲೆಂದು ಶುಭ ಹಾರೈಸಿದರು. ಹಿರಿಯ ಯಕ್ಷಗಾನ ಕಲಾವಿದ, ದಸ್ತಾವೇಜು ಬರಹಗಾರ ಕರಿಂಬಿಲ ಲಕ್ಷ್ಮಣ ಪ್ರಭು, ತುಳುವೆರೆ ಆಯನೋ‌ ಕೂಟದ ಕಾರ್ಯದರ್ಶಿ ಜಯ ಮಣಿಯಂಪಾರೆ, ಪ್ರಗತಿ ಸ್ಪೆಶಲ್ ಸ್ಕೂಲ್ ಉಳಿಯತ್ತಡ್ಕ ಇದರ ಪ್ರಾಂಶುಪಾಲ ಉದಯ ಕುಮಾರ್ ಎಂ, ಕವಿ ಸುಂದರ ಬಾರಡ್ಕ ಭಾಗವಹಿಸಿದ್ದರು. ಶಿಕ್ಷಕರಾದ ವೈಶಾಖ್, ಚಿತ್ರಿಕಾ ಸಹಕರಿಸಿದರು. ದಿವಾಕರ್ ಬಲ್ಲಾಳ್ ಎ.ಬಿ. ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡರು. ಗೀತಾಲಕ್ಷ್ಮಿ ಪಿ ಸ್ವಾಗತಿಸಿ, ಪ್ರಾಂಶುಪಾಲ ಕಿಶೋರ್ ವಾದಿಸಿದರು.

Post a Comment

0 Comments