Ticker

6/recent/ticker-posts

Ad Code

ಜೂನ್ 15 ರಿಂದ ಕೇರಳದ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ : ವಿಡಿಎಸ್ ಪ್ರಥಮ ಸಂಪುಟ ಸಭೆ ನಿರ್ಧಾರ


ತಿರುವನಂತಪುರ: ಮುಖ್ಯಮಂತ್ರಿ ವಿ.ಡಿ.ಸತೀಶನ್ ನೇತೃತ್ವದ ರಾಜ್ಯ ಸರಕಾರ ಚುನಾವಣೆ ಸಂದರ್ಭ ನೀಡಿದ ಭರವಸೆಗಳನ್ನು ಒಂದೊಂದಾಗಿ ಈಡೇರಿಸಲು ಮುಂದಾಗಿರುವುದಾಗಿ ಘೋಷಿಸಿದೆ.  ಜೂನ್ 15 ರಿಂದ ರಾಜ್ಯದಲ್ಲಿ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಏರ್ಪಡಿಸಲಾಗುವುದು. ಇಂದು (ಸೋಮವಾರ) ನಡೆದ ಮೊದಲ ಸಚಿವ ಸಂಪುಟ ಸಭೆಯ ನಂತರ  ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಇದರೊಂದಿಗೆ ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ರೂ ಗೌರವಧನ ಹೆಚ್ಚಿಸಲು  ರಾಜ್ಯ ಸರಕಾರ ನಿರ್ದರಿಸಿದೆ ಎಂದವರು ಹೇಳಿದರು. ಹಿರಿಯ ನಾಗರಿಕರಿಗೆ ವಿಶೇಷ ವಿಭಾಗ ರೂಫುರೇಶೆ ,  ಆಶಾ ಕಾರ್ಯಕರ್ತೆಯರ ಗೌರವಧನ ರೂ. 3000 ಹೆಚ್ಚಳ, ಅಂಗನವಾಡಿ ಕಾರ್ಯಕರ್ತೆಯರಿಗೆ, ಪ್ರಿಪ್ರೈಮರಿ  ಶಿಕ್ಷಕರ ವೇತನದಲ್ಲಿ ತಲಾ ರೂ ಸಾವಿರದಂತೆ ಹೆಚ್ಚಳ ಮಾಡುವುದಾಗಿ ಸಂಪುಟ ಸಭೆಯಲ್ಲಿ ನಿರ್ಧರಿಸಿರುವುದಾಗಿ ವಿ.ಡಿ.ಸತೀಶನ್ ತಿಳಿಸಿದರು.

Post a Comment

0 Comments