ತಿರುವನಂತಪುರ : ರಾಜ್ಯಪಾಲ ರಾಜೇಂದ್ರ ಅರ್ಲೇಕರ್ 16ನೇ ಕೇರಳ ವಿಧಾನಸಭೆಯ ಮೊದಲ ನೀತಿ ಹೇಳಿಕೆಗೈಯುತ್ತಾ ವಿಧಾನಸಭೆಯ ಇತಿಹಾಸದಲ್ಲಿ ಮೊದಲ ಬಾರಿಗೆ, ವಂದೇ ಮಾತರಂ ಹಾಡುವಿಕೆಯೊಂದಿಗೆ ಕಲಾಪ ಪ್ರಾರಂಭವಾಯಿತು. ಆದರೆ ಸಂಪೂರ್ಣ ವಂದೇ ಮಾತರಂ ಅನ್ನು ಹಾಡಲಾಗಿಲ್ಲ. ಪೊಲೀಸ್ ಬ್ಯಾಂಡ್ ವಂದೇ ಮಾತರಂನ ಮೊದಲ ಭಾಗವನ್ನು ವಾಚಿಸಿದೆ. ಸಂಗೀತ ಮಾತ್ರ ಇತ್ತು ಮತ್ತು ಸಾಹಿತ್ಯವನ್ನು ಕೈಬಿಡಲಾಗಿದೆ. ಸಂಪೂರ್ಣ ವಂದೇ ಮಾತರಂ ಹಾಡಬೇಕುವ ಎಂಬ ಸಲಹೆ ಬಂದಿತ್ತು. ಆದರೆ ಸರ್ಕಾರ ಇದನ್ನು ಸ್ವೀಕರಿಸಲಿಲ್ಲ ಎನ್ನಲಾಗಿದೆ. ಮುಖ್ಯಮಂತ್ರಿ ವಿ.ಡಿ. ಸತೀಶನ್ ನೇತೃತ್ವದ ಯುಡಿಎಫ್ ಸರ್ಕಾರದ ಮೊದಲ ನೀತಿ ಹೇಳಿಕೆ ಭಾಷಣಕ್ಕಾಗಿ ಆಗಮಿಸಿದ ರಾಜ್ಯಪಾಲರನ್ನು ಸ್ಪೀಕರ್ ತಿರುವಂಚೂರು ರಾಧಾಕೃಷ್ಣನ್, ಸಚಿವ ಸನ್ನಿ ಜೋಸೆಫ್ ಮತ್ತು ಮುಖ್ಯಮಂತ್ರಿ ವಿ.ಡಿ. ಸತೀಶನ್ ಸ್ವಾಗತಿಸಿದರು.

0 Comments