Ticker

6/recent/ticker-posts

Ad Code

ಸರಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ಹೆರಿಗೆಯಾದ ತಕ್ಷಣ ನವಜಾತ ಶಿಶುವನ್ನು ಕಿಟಿಕಿ ಮೂಲಕ ಹೊರಗೆಸೆದ ಯುವತಿ ವಿರುದ್ದ ನರ ಹತ್ಯೆ ಕೇಸು


ಆಲಪ್ಪುಳ: ಹೊಟ್ಟೆ ನೋವಿಗೆ ಚಿಕಿತ್ಸೆಗೆಂದು ಬಂದ  ವಿದ್ಯಾರ್ಥಿನಿಯೊಬ್ಬಳು ಆಸ್ಪತ್ರೆಯ ಶೌಚಾಲಯದಲ್ಲಿ ಹೆರಿಗೆಯಾಗಿ ನವಜಾತ ಶಿಶುವನ್ನು ವೆಂಟಿಲಿಟರ್ ಮೂಲಕ ಹೊರಗೆಸೆದ ಪ್ರಕರಣದಲ್ಲಿ ಶಿಶುವಿನ ತಾಯಿ ವಿರುದ್ಧ ನರ ಹತ್ಯಾ ಪ್ರಯತ್ನ ಕೇಸು ದಾಖಲಿಸಲಾಗಿದೆ.  ಮಂಗಳವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಹರಿಪಾಡ್ ಸರಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಜನನದ ನಂತರ, ಮಗುವನ್ನು ಶೌಚಾಲಯದ ವೆಂಟಿಲೀಟರ್ ಮೂಲಕ ಹೊರಹಾಕಲಾಯಿತು. ಹೊರಗೆ ಬಿದ್ದ ನವಜಾತ ಶಿಶು  ಬೀದಿನಾಯಿಗಳು  ವಾಸಿಸುತ್ತಿದ್ದ ಜಾಗಕ್ಕೆ ಬಿದ್ದಿದ್ದು  ಈ ಸ್ಥಳದಲ್ಲಿ ನಾಯಿಗಳ ನಡುವೆ ಒಮ್ಮೆಲೆ ಮಗು. ಅಳುತ್ತಿರುವುದನ್ನು ಗಮನಿಸಿದ ಸೆಕ್ಯೂರಿಟಿ ಸಿಬ್ಬಂದಿ ಹಾಗೂ ಆಸ್ಪತ್ರೆ ಸಿಬ್ಬಂದಿ ಜತೆಗೆ ಈ ಸಂದರ್ಭ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ತಿಶಾ, ಡಾ.ಆಲ್ಫಿ, ನರ್ಸಿಂಗ್ ಅಧಿಕಾರಿ ಜಿಶಾ, ಸಹಾಯಕರಾದ ಅನಿಲ್, ರೆಜಿನಾ ಹಾಗೂ ಭದ್ರತಾ ಸಿಬ್ಬಂದಿ ಮಗುವನ್ನು ರಕ್ಷಿಸಿದ್ದಾರೆ. ಮಗುವಿಗೆ ಯಾವುದೇ ಗಾಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮಗು ಮತ್ತು ತಾಯಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ತಜ್ಞರ ಚಿಕಿತ್ಸೆಗಾಗಿ ಅವರನ್ನು ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಈ ನಡುವೆ ಹುಡುಗಿ ಯಾರಿಂದ ಗರ್ಭಿಣಿಯಾಗಿದ್ದಾಳೆ ಎಂಬುದು ಸ್ಪಷ್ಟವಾಗಿಲ್ಲ. ಈ ಸಂಬಂಧ ಹರಿಪಾಡ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Post a Comment

0 Comments