Ticker

6/recent/ticker-posts

Ad Code

ಮನೆ ಬಾಗಿಲಿಗೆ ಬರಲಿದೆ ಸಾಕುಪ್ರಾಣಿಗಳ ಮೊಬೈಲ್ ಶಸ್ತ್ರಚಿಕಿತ್ಸಾ ವ್ಯವಸ್ಥೆ

 

ಕಾಸರಗೋಡು : ಅನಾರೋಗ್ಯಕ್ಕೆ ಒಳಗಾದಾಗ ಸಾಕು ಪ್ರಾಣಿಗಳಿಗೆ ಮನೆಯಲ್ಲಿಯೇ ಸಂಪೂರ್ಣ ಚಿಕಿತ್ಸೆ  ನೀಡಲು ಜಿಲ್ಲೆಯಲ್ಲಿ ಪಶುಸಂಗೋಪನಾ ಇಲಾಖೆಯ ವತಿಯಿಂದ  ಅತ್ಯಾಧುನಿಕ ಸೌಲಭ್ಯಗಳು ಮತ್ತು ರಾತ್ರಿ ತುರ್ತು ಚಿಕಿತ್ಸಾ ಘಟಕಗಳನ್ನು ಹೊಂದಿರುವ ಮೊಬೈಲ್ ಶಸ್ತ್ರಚಿಕಿತ್ಸಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಅನಾರೋಗ್ಯಕ್ಕೊಳಗಾದ ಸಾಕುಪ್ರಾಣಿಗಳನ್ನು  ಆಸ್ಪತ್ರೆಗೆ ಕರೆದೊಯ್ಯುವುದಕ್ಕೆ ಶಾಶ್ವತ ಪರಿಹಾರವಾಗಿ ಮನೆ ಬಾಗಿಲಿಗೆ ಅತ್ಯುತ್ತಮ ಚಿಕಿತ್ಸೆ ನೀಡುವ ಈ ಯೋಜನೆಗಳು ಹೈನುಗಾರರು ಮತ್ತು ಪಶುಪಾಲನಾ ಕೇಂದ್ರಗಳಿಗೆ ದೊಡ್ಡ ವರದಾನವಾಗಿದೆ. 

1962 ಟೋಲ್-ಫ್ರೀ ಸಂಖ್ಯೆ ಗೆ ಕರೆ ಮಾಡುವ ಮೂಲಕ, ಮೊಬೈಲ್ ಪಶುವೈದ್ಯಕೀಯ ಘಟಕದ ಸಹಾಯವು ನಿಮ್ಮ ಮನೆಗೆ ಬರುತ್ತದೆ. ಇದರಲ್ಲಿ ರಾತ್ರಿ ವೇಳೆಯಲ್ಲೂ ಇಬ್ಬರು ಪಶುವೈದ್ಯಕೀಯ ಶಸ್ತ್ರಚಿಕಿತ್ಸಕರು ಮತ್ತು ಇಬ್ಬರು ಕಚೇರಿ ಸಹಾಯಕರನ್ನು ನೇಮಕ ಮಾಡಲಾಗಿದೆ. ಹಸು ಮತ್ತು ಮೇಕೆಗಳಿಗೆ ಚಿಕಿತ್ಸಾ ವೆಚ್ಚ 460 ರೂ. ನಾಯಿ ಮತ್ತು ಬೆಕ್ಕುಗಳಿಗೆ 900 ರೂ ಎಂದು ನಿಗದಿಪಡಿಸಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

Post a Comment

0 Comments