Ticker

6/recent/ticker-posts

Ad Code

ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿ : ತಾಯಿ ಮಗ ದುರ್ಮರಣ

ಹಾಸನ : ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾದ ಪರಿಣಾಮ ತಾಯಿ-ಮಗ ಸಾವನ್ನಪ್ಪಿದ ಘಟನೆ ಆಲೂರು ತಾಲೂಕಿನ ಹೊನ್ನೇನಹಳ್ಳಿ ಕ್ರಾಸ್ ಬಳಿ ನಡೆದಿದೆ. ಮೃತರನ್ನು ಕುದುರುವಳ್ಳಿ ಗ್ರಾಮದ ಪ್ರಿಯಾಂಕ (28) ಹಾಗೂ ವಿನಿತ್ (7) ಎಂದು ಗುರುತಿಸಲಾಗಿದೆ. ಮಗನನ್ನು ಹಾಸನದ ಶಾಲೆಗೆ ಸೇರಿಸಲು ವರ್ಗಾವಣೆ ಪತ್ರ ತೆಗೆದುಕೊಂಡು ಹೋಗಲು ಇಬ್ಬರು ಬಂದಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದೆ.  ಆಟೋ ಚಾಲಕ ಅಬ್ಬಾಸ್ (52),ಮೃತರ ಇನ್ನೊರ್ವ ಪುತ್ರ  ಸಾಗರ್ (13) ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Post a Comment

0 Comments