Ticker

6/recent/ticker-posts

Ad Code

ನವಪುರಂನ ಪ್ರಕೃತಿಯ ಮಡಿಲಲ್ಲಿ ಬಹು ಭಾಷಾ ಕವಿ ಸಂಗಮ

 

ಕಾಸರಗೋಡು : ಚೆರುಪುಳ ಸಮೀಪದ ಕಕ್ಕಾಡ್ ನವಪುರಂ ಮತಾತೀತ ದೇವಾಲಯದ ವಾರ್ಷಿಕ ಉತ್ಸವದಂಗವಾಗಿ ಬಹುಭಾಷಾ ಕವಿಗೋಷ್ಠಿ ಯಶಸ್ವಿಯಾಗಿ ಜರಗಿತು. ಪ್ರಕೃತಿಯ ರಮಣೀಯ ದೃಶ್ಯ ಸಾನ್ನಿಧ್ಯದಲ್ಲಿ ಜಿನುಗುವ ಹನಿಮಳೆಯ ಮಧ್ಯೆ ಸಾಹಿತಿಗಳಿಗೆ, ಸಾಹಿತ್ಯಾಸಕ್ತರಿಗೆ ದಿವ್ಯಾನುಭವವಾಯಿತು. 

 ಸವಿ ಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ ಇದರ ವತಿಯಿಂದ ಸಂಚಾಲಕ ಸುಭಾಷ್ ಪೆರ್ಲ ಅವರ ವಿನೂತನ ಪರಿಕಲ್ಪನೆಯಲ್ಲಿ ಬಹುಭಾಷಾ ಕವಿಗೋಷ್ಠಿ ಜರಗಿತು. ಕವಿ, ಪ್ರಾಧ್ಯಾಪಕ  ಹರೀಶ್. ಜಿ ಮೀಯಪದವು ಅಧ್ಯಕ್ಷತೆ ವಹಿಸಿ ಇಂದಿನ ಕಾವ್ಯ ಸಂಧರ್ಭದ ಬಗ್ಗೆ ಮಾತನಾಡಿದರು. ಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲಾ ಕವಿಗಳು ವಾಚಿಸಿದ ಕವನಗಳನ್ನು ಸಂಕ್ಷಿಪ್ತವಾಗಿ ಪರಾಮರ್ಶಿಸಿ ಪ್ರೋತ್ಸಾಹಿಸಿದರು. ಕವಯತ್ರಿ ಪ್ರಮೀಳಾ ಚುಳ್ಳಿಕಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕವಿತೆಯನ್ನು ಪ್ರಸ್ತುತ ಪಡಿಸಿದರು. ಅನುರಾಧ ರಾಜೀವ್ ಸುರತ್ಕಲ್ ಹಿತ ನುಡಿಯಾಡಿದರು. ದಿನೇಶ್ ಕುಂದರ್ ಬಿಳಿನೆಲೆ, ಪ್ರೇಮ ಆರ್ ಶೆಟ್ಟಿ ,ಜ್ಯೋತ್ಸ್ನಾ ಕಡಂದೇಲು  ಶಶಿಕಲಾ ಕುಂಬಳೆ, ವಿಜಯಕಾನ, ರಿತೇಶ್ ಕಿರಣ್ ಕಾಟುಕುಕ್ಕೆ, ಸವಿತಾ ಕಾಟುಕುಕ್ಕೆ, ಹರ್ಷಿತಾ ಪೆರ್ಲ, ಸುಶೀಲಾ ಪದ್ಯಾಣ, ಜನಾರ್ದನ ನಾಯ್ಕ ಬೊಟ್ಟಾರಿ, ಸುಮನಾ ಕರಿಂಬಿಲ, ನರಸಿಂಹ ಭಟ್ ಏತಡ್ಕ, ಅವನಿ ಕರಿಂಬಿಲ, ಅಶ್ವಿನಿ ಕೊಡಿಬೈಲು, ಶ್ರೀದೇವಿ ಬಸ್ರೂರು. ಅನುರಾಧ ರಾಜೀವ್ ಸುರತ್ಕಲ್, ಕುಂಞಪ್ಪ ತ್ರಿಕರಿಪುರ. ಮಧುನಂಬಿಯಾರ್ ಮೂಕಮಂಗಳ ವಿವಿಧ ಭಾಷೆಗಳಲ್ಲಿ ಕವಿತೆ ವಾಚಿಸಿದರು. ಕವಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಸುಶೀಲ ಪದ್ಯಾಣ ಮತ್ತು ಹರ್ಷಿತಾ ಪೆರ್ಲ ಕಾರ್ಯಕ್ರಮವನ್ನು ನಿರೂಪಿಸಿದರು.

Post a Comment

0 Comments