ಕಾಸರಗೋಡು : ವೆಲ್ಲರಿಕುಂಡ್‌ನಲ್ಲಿ ಪೊಲೀಸ್ ಜೀಪ್ ಮತ್ತು ಆಟೋ ಡಿಕ್ಕಿ, ಆಟೋ ಚಾಲಕ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಕಾಂಞಂಗಾಡ್ ನ ಪುಂಗಮ್‌ಚಲ್ ಮೂಲದ ಆಟೋ ಚಾಲಕ ರಾಜು (35) ಮೃತಪಟ್ಟ ವ್ಯಕ್ತಿ. ವೆಳ್ಳರಿಕುಂಡು ಸರ್ಕಾರಿ ಆಸ್ಪತ್ರೆ ಬಳಿ ಗುರುವಾರ ಸಂಜೆ 7.30 ರ ಸುಮಾರಿಗೆ ಈ ಘಟನೆ ನಡೆದಿದೆ.
ಅಪಘಾತದಲ್ಲಿ ಗಾಯಗೊಂಡ ಮಹಿಳಾ ಎಎಸ್‌ಐ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಅಧಿಕಾರಿಯ ನಿವೃತ್ತಿ ಸಮಾರಂಭದಲ್ಲಿ ಭಾಗವಹಿಸಲು ಪೋಲಿಸ್ ಅಧಿಕಾರಿಗಳು ಜೀಪಿನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

0 Comments