ಕಣ್ಣೂರು : ಯುಡಿಎಫ್ ಸರಕಾರ ಆಡಳಿತಕ್ಕೆ ಬಂದು ಪ್ರಮಾಣ ವಚನ ಸ್ವೀಕರಿಸಿದ ಸಂಭ್ರಮವನ್ನು ಆಚರಿಸುವ ವೇಳೆ ಪಟಾಕಿ ಸಿಡಿದು ಒಂಬತ್ತು ವರ್ಷದ ಬಾಲಕ ಸಾವನ್ನಪ್ಪಿದ ಪ್ರಕರಣ ಕಣ್ಣೂರಿನ ಅಯಿಕೋಡ್‌ನಲ್ಲಿ ನಡೆದಿದೆ. ಮೃತನನ್ನು ಪುನಕಪ್ಪಾರೆ ನಿವಾಸಿ ಅಮನ್ (9) ಎಂದು ಗುರುತಿಸಲಾಗಿದೆ. ಹೊಸ ಸರ್ಕಾರದ ಪ್ರಮಾಣವಚನ ಸಮಾರಂಭಕ್ಕಾಗಿ ತಂದಿದ್ದ ಪಟಾಕಿಗಳನ್ನು ಮಕ್ಕಳು ಸಿಡಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇತರ ಮೂವರು ಮಕ್ಕಳು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

0 Comments