ಕಣ್ಣೂರು: ಗೃಹಪ್ರವೇಶದ ಸಂದರ್ಭದಲ್ಲಿ ಸ್ವತಃ ಮನೆಯ ಯಜಮಾನನಿಗೆ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ದುರ್ಘಟನೆ ಕಣ್ಣೂರಿನಲ್ಲಿ ಇಂದು ಬೆಳಗ್ಗೆ ನಡೆದಿದೆ. ಇಲ್ಲಿನ ಪೊಡಿಕುಂಡು ರಾಮತೇರುವಿನ ವಯಲಿಚೇರಿಯ ರಾಜೇಶ್ (52) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರ ಹೊಸ ಮನೆಯ ಗೃಹಪ್ರವೇಶ ನಡೆಯುತ್ತಿತ್ತು. ಇದರ ಅಂಗವಾಗಿ, ಅಂಗಳದಲ್ಲಿ ಹಾಕಿದ್ದ ಪೆಂಡಾಲ್‌ನ ಕಂಬಕ್ಕೆ ವಿದ್ಯುತ್ ಹರಿದು ಬಂದಿದ್ದು ಇದನ್ನು ಹಿಡಿದ ಅವರು ಆಘಾತಕ್ಕೊಳಗಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತದರೂ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು. ಮೃತರು ಪತ್ನಿ ಶ್ರೀಜಾ ಎಡಕ್ಕಡನ್. ಮಗ ಆದಿತ್ ರಾಜೇಶ್. ಒಡಹುಟ್ಟಿದವರಾದ ಮಹೇಶ್, ಶೈನಾ, ಲೇಖಾ ಎಂಬಿವರನ್ನಗಲಿದ್ದಾರೆ.

0 Comments