Ticker

6/recent/ticker-posts

Ad Code

ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ 16 ವರ್ಷದ ಬಾಲಕಿ ಗರ್ಭಿಣಿ : ಅತ್ಯಾಚಾರಗೈದ 16 ವರ್ಷದ ಬಾಲಕನ ವಿರುದ್ಧ ಪೋಕ್ಸೋ ಕೇಸು ದಾಖಲು

ಕಾಂಞಂಗಾಡು: ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ 16 ವರ್ಷದ ಬಾಲಕಿ ಗರ್ಭಿಣಿ ಎಂಬ ವರದಿ. ಈ ಪ್ರಕರಣದಲ್ಲಿ ಹೊಸದುರ್ಗ ಪೊಲೀಸರು 16 ವರ್ಷದ ಬಾಲಕನ ವಿರುದ್ಧ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಾಲಕಿ ಅತ್ಯಾಚಾರಕ್ಕೊಳಗಾದ ನಂತರ ಗರ್ಭಿಣಿಯಾಗಿದ್ದು ಬಾಲಕಿಯನ್ನು ಆಕೆಯ ಮನೆಯವರು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಈ ವಿಷಯ ತಿಳಿದು ಬಂದಿದೆ ಎಂದು ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದರು.

ಪೊಲೀಸರು ಬಂದು ಆಕೆಯ ಹೇಳಿಕೆಯನ್ನು ದಾಖಲಿಸಿದಾಗ, 16 ವರ್ಷದ ಬಾಲಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬುದು ಸ್ಪಷ್ಟಪಡಿಸಿದ್ದಳು. ಬಾಲಕ ಊರ ಜಾತ್ರೆಯ ಸಂದರ್ಭ  ಮತ್ತು ನಂತರ ಟ್ಯೂಷನ್ ಸೆಂಟರ್‌ನಲ್ಲಿ ಸಂಪರ್ಕ ಹೊಂದಿದ್ದರು ಎಂದು ಹೇಳಲಾಗುತ್ತದೆ. 16ರ ಬಾಲಕನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಿ ರಿಮಾಂಡಿನಲ್ಲಿರಿಸಲಾಗಿದೆ.

Post a Comment

0 Comments