ಕಾಸರಗೋಡು : ದೇವರು ಎಲ್ಲೆಡೆ ಇದ್ದಾನೆ. ಚಂಚಲ ಮನಸ್ಸನ್ನು ಏಕಾಗ್ರತೆಯತ್ತ ಒಯ್ಯುವಲ್ಲಿ ದೇವಾಲಯಗಳು ಸೂಕ್ತ ತಾಣಗಳು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂಪನ್ನಗೊಂಡು ಈ ಸಂಬಂಧ ನಡೆದ ಸಮಾರೋಪ ಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡುತ್ತಿದ್ದರು. ಸಾಮಾಜಿಕ ಒಗ್ಗಟ್ಟಿನಿಂದ ಗಮನಾರ್ಹ ಸಾಧನೆಗಳು ಸಾಧ್ಯ ಎಂಬುದನ್ನು ಧಾರ್ಮಿಕತೆ ಈಗಾಗಲೇ ಸಾಬೀತುಪಡಿಸಿದೆ. ಅನೇಕ ದೇವಾಲಯಗಳ ಪುನರುದ್ಧರಣ ಇದಕ್ಕೆ ಸಾಕ್ಷಿ ಎಂದವರು ವಿಶ್ಲೇಷಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಮತ್ತು ಹಾರ್ಮೋನಿಯಂ ಹಿರಿಯ ವಾದಕ ಭಾಸ್ಕರ ಕಾಳ್ಯಂಗಾಡು ಅವರಿಗೆ ಗೌರವಾರ್ಪಣೆ ನಡೆಯಿತು. ಜಾನಪದ ವಿದ್ವಾಂಸ ಡಾ.ರವೀಶ್ ಪಡುಮಲೆ ಧಾರ್ಮಿಕ ಭಾಷಣ ಮಾಡಿದರು. ಪತ್ರಕರ್ತ ವೀಜಿ.ಕಾಸರಗೋಡು ಅಭಿನಂದನೆ ಭಾಷಣ ಮಾಡಿದರು. ಕಾಳ್ಯಂಗಾಡು ಕ್ಷೇತ್ರದ ಆಡಳಿತ ಮೊಕ್ತೇಸರ ಅಚ್ಯುತ ಕಾಳ್ಯಂಗಾಡು, ಧರ್ಮದರ್ಶಿ ನಾರಾಯಣ ಕಾಳ್ಯಂಗಾಡು, ಕೂಡ್ಲು ಕುತ್ಯಾಳ ಕ್ಷೇತ್ರದ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್, ಮಂಗಳೂರು ಆತ್ಮಶಕ್ತಿ ವಿವಿಧ್ಧೋದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಜೀರ್ಣೋದ್ಧಾರ ಸಮಿತಿ ಗೌರವ ಸಲಹೆಗಾರ ರಘು ಕೆ.ಮೀಪುಗುರಿ, ದೇವರಗುಡ್ಡೆ ಕ್ಷೇತ್ರದ ಮಹಾಬಲ ರೈ, ಶೇಷವನ ಕ್ಷಥ್ರದ ಅಧ್ಯಕ್ಷ ವೇಣುಗೋಪಾಲ ಮಾಸ್ಟರ್, ಪಾರೆಕಟ್ಟೆ ಶ್ರೀ ಮುತ್ತಪ್ಪನ್ ಕ್ಷೇತ್ರದ ರಘುವೀರ್ ಶೆಟ್ಟಿ, ಕಾಳ್ಯಂಗಾಡು ಎಸ್.ಎಂ.ಎಸ್. ಕ್ಲಬ್ ಪ್ರಧಾನ ಕಾರ್ಯದರ್ಶಿ ಅಜಯ್ ಮೊದಲಾದವರು ಇದ್ದರು. ಶಾಂತಕುಮಾರ್ ಮುಂಡಿತ್ತಡ್ಕ ಸ್ವಾಗತಿಸಿದರು. ಪ್ರಶಾಂತಿ ಪ್ರಶಾಂತ್ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಜಗದೀಶ್ ಕೂಡ್ಲು ಪ್ರಾಸ್ತಾವಿಕ ಭಾಷಣ ಮಾಡಿದರು. ಸುರೇಖಾ ದಯಾನಂದ ಟೀಚರ್ ವಂದಿಸಿದರು.

0 Comments