Ticker

6/recent/ticker-posts

Ad Code

ಬದಿಯಡ್ಕದಲ್ಲಿ ರಾಜೀವ್ ಗಾಂಧಿಯವರ 35ನೇ ಹುತಾತ್ಮ ದಿನಾಚರಣೆ

ಬದಿಯಡ್ಕ : ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಮಾಜಿ ಪ್ರಧಾನ ಮಂತ್ರಿ, ಆಧುನಿಕ ಭಾರತದ ರೂವಾರಿಯೂ ಆದ ರಾಜೀವ್ ಗಾಂಧಿಯವರ 35ನೇ ಹುತಾತ್ಮ ದಿನ ಕಾರ್ಯಕ್ರಮವನ್ನು ನಡೆಸಲಾಯಿತು. ಮಂಡಲಾಧ್ಯಕ್ಷ ಶ್ಯಾಮ ಪ್ರಸಾದ ಮಾನ್ಯ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಕಾಂಗ್ರೆಸ್ ನೇತಾರ ಚಂದ್ರಹಾಸ ರೈಯವರು ರಾಜೀವ್ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಹಿರಿಯ ನೇತಾರ ತಿರುಪತಿ ಕುಮಾರ್ ಭಟ್ ಪೆರುಮುಖ, ಕಾರಡ್ಕ ಬ್ಲೋಕ್ ಕಾಂಗ್ರೆಸ್ ಉಪಾಧ್ಯಕ್ಷ ಗಂಗಾಧರ ಗೋಳಿಯಡ್ಕ , ಕಾರ್ಯದರ್ಶಿಗಳಾದ ಚಂದ್ರಹಾಸನ್ ನಂಬ್ಯಾರ್ , ರಾಮ ಪಟ್ಟಾಜೆ , ಶಾಫಿ ಗೋಳಿಯಡ್ಕ , ಯೂತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಬದಿಯಡ್ಕ , ನೇತಾರರಾದ ಕುಮಾರನ್ ನಾಯರ್ , ಸಿರಿಲ್ ಡಿ ಸೋಜ , ಕುಂಞಿ ಕಣ್ಣನ್ ಚೆಡೇಕಲ್ , ರವಿ ಕುಂಟಾಲು ಮೂಲೆ , ವಿನ್ಸಂಟ್ ವಿದ್ಯಾಗಿರಿ , ಕೇಶವ ಬದಿಯಡ್ಕ, ಬಲ್ತೀಸ್ ಕ್ರಾಸ್ತ , ರಾಮ ಕೃಷ್ಣನ್ , ಸುಧೀರ್ ಬಾಂಜತ್ತಡ್ಕ, ಉಮೇಶ ಚೆಡೇಕಲ್ ಮೊದಲಾದವರು ಭಾಗವಹಿಸಿದರು.

Post a Comment

0 Comments