Ticker

6/recent/ticker-posts

Ad Code

ಪೂಜೆ ನೆಪದಲ್ಲಿ ಲೈಂಗಿಕ ದೌರ್ಜನ್ಯ : ಕಾಮುಕ ಸ್ವಾಮೀಜಿಯ ವಿರುದ್ಧ ಪ್ರಕರಣ ದಾಖಲು

 

ಬೆಂಗಳೂರು : ಪೂಜೆ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಕಾಮುಕ ಸ್ವಾಮೀಜಿಯ ಮುಖವಾಡವನ್ನು  ಸಂತ್ರಸ್ತ ಮಹಿಳೆಯೊಬ್ಬರು ಕಳಚಿರುವ ಘಟನೆ  ಚೆನ್ನಮಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜ್ಯೋತಿಷ್ಯ ಹಾಗೂ ಸಂಖ್ಯಾಶಾಸ್ತ್ರದ ಹೆಸರಲ್ಲಿ ಮಹಿಳೆಯರನ್ನು  ವಂಚಿಸಿ ದೌರ್ಜನ್ಯವೆಸಗುತ್ತಿದ್ದ ಮೋಹನ್ ಕುಮಾರ್ ಜೆ ಎಂಬ ನಕಲಿ  ಜ್ಯೋತಿಷಿ ಮೇಲೆ ಎಫ್‌ಐಆರ್  ದಾಖಲಾಗಿದೆ. ಒಂದು ವೇಳೆ ಅವನ ಇಚ್ಚೆಗೆ ಒಪ್ಪದಿದ್ದರೆ, ನಿನ್ನ ಗಂಡ ಮಕ್ಕಳನ್ನು  ವಾಮಾಚಾರ ಮಾಡಿ ಸಾಯಿಸುವುದಾಗಿ ಹೆದರಿಸುತ್ತಿದ್ದನೆಂದು ತಿಳಿದು ಬಂದಿದೆ.  

ಮೋಹನ್ ಕುಮಾರ್ ನಿಮ್ಮ ಕುಟುಂಬಕ್ಕೆ ತುಂಬಾ ತೊಂದರೆ ಇದೆ. ನಿಮ್ಮ ವ್ಯಾಪಾರ ಕಷ್ಟದಲ್ಲಿದೆ ನಿಮ್ಮ ಕಷ್ಟಗಳಿಗೆ ಪರಿಹಾರ ಮಾಡಿಕೊಡುತ್ತೇನೆ. ನಿಮ್ಮ ಸಂಸಾರಕ್ಕೆ ನಾನು ಸಹಾಯ ಮಾಡುತ್ತೇನೆ, ದೀಕ್ಷೆ ಕೊಡುತ್ತೇನೆ ಎಂದು ಪುಸಲಾಯಿಸಿ ಲಕ್ಷಾಂತರ ಹಣ ದೋಚಿದ್ದಲ್ಲದೆ  ಗೃಹಿಣಿಯ ಮೇಲೆ ಲೈಂಗಿಕ ದೌರ್ಜನ್ಯ ಕೂಡ ನಡೆಸಿದ್ದಾನೆ. ಸಂತ್ರಸ್ತ ಮಹಿಳೆ ಕೊನೆಗೂ ಧೈರ್ಯ ಮಾಡಿ ಚೆನ್ನಮಕೆರೆ ಅಚ್ಚುಕಟ್ಟು ಪೊಲೀಸ್ ಸ್ಟೇಷನ್ ಗೆ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕು ಗೊಳಿಸಿದ್ದು, ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿರುವ ಕಾಮುಕ ಸ್ವಾಮೀಜಿ ಮೊಹನ್ ಕುಮಾರ್ ಗಾಗಿ ಹುಡುಕಾಟ ನಡೆಸಿದ್ದಾರೆ.

Post a Comment

0 Comments