ಪೆರ್ಲ: ಎಣ್ಮಕಜೆ ಗ್ರಾಮದ ಪೂಪಾಡಿಕಲ್ಲು ಖಂಡಿಗೆ ಎಂಬಲ್ಲಿ ಕಳೆದ ಐದು ವರ್ಷಗಳಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯನ್ನು ರೂಪೀಕರಿಸಿ, ಇದರ ವತಿಯಿಂದ ನಡೆಯುತ್ತಿರುವ ಶ್ರೀಕೃಷ್ಣ ಜನ್ಮಾಷ್ಟಮಿಯ ವತಿಯಿಂದ ಭವ್ಯವಾದ ಶ್ರೀಕೃಷ್ಣ ಮಂದಿರ ನಿರ್ಮಾಣದ ಸಹಾಯಾರ್ಥವಾಗಿ 'ಶ್ರೀಕೃಷ್ಣ ನಿಧಿ' ಯೋಜನೆಗೆ ಚಾಲನೆ ನೀಡಲಾಯಿತು. ಮಾಣಿಲ ಶ್ರೀಧಾಮದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಯೋಜನೆಯ ಚೀಟಿಯನ್ನು ಬಿಡುಗಡೆಗೊಳಿಸಿ ಪ್ರಸ್ತುತ 'ಶ್ರೀಕೃಷ್ಣ ನಿಧಿ' ಯೋಜನೆಯಲ್ಲಿ ಪತ್ರಿಯೊಬ್ಬರೂ ಪಾಲ್ಗೊಳ್ಳುವುದರ ಜತೆಗೆ, ಮಂದಿರದ ಕೆಲಸಕಾರ್ಯಗಳನ್ನು ಮುಂದುವರಿಸಲು ಸಹಕಾರ ನೀಡಬೇಕೆಂದು ನುಡಿದರು. 'ಶ್ರೀಕೃಷ್ಣ ಸೇವಾ ಸಮಿತಿ' ಹಾಗೂ ನಿರ್ಮಾಣ ಸಮಿತಿಯ ಆಶ್ರಯದಲ್ಲಿ ಮಂದಿರ ನಿರ್ಮಾಣಕ್ಕೆ ಉದ್ದೇಶವಿರಿಸಲಾಗಿದೆ. ಸುಬ್ರಾಯ ನಾಯಕ್ ಖಂಡಿಗೆಯವರು ಈಗಾಗಲೇ 10 ಸೆಂಟ್ಸ್ ಸ್ಥಳವನ್ನು ಸ್ಥಳದಾನ ಮಾಡಿರುತ್ತಾರೆ. ನೀರಿನ ವ್ಯವಸ್ಥೆಗೆ ಬೇಕಾಗಿ ಒಂದು ಕೊಳವೆಬಾವಿಯನ್ನು ಕೂಡಾ ಮಾಡಲಾಗಿದೆ. ಮುಂದೆ ಸುತ್ತು ಆವರಣಗೋಡೆ, ಶಾಸ್ತ್ರಬದ್ಧ ವಾಸ್ತು ಶೈಲಿಯ ನೂತನ ಗರ್ಭಗುಡಿ ಮಂದಿರ, ನೈವೇದ್ಯ ಕೊಠಡಿ. ಅಡುಗೆ ಕೋಣೆ, ಕಾರ್ಯಾಲಯ ನಿರ್ಮಾಣಕ್ಕೆ ಅಂದಾಜು ಸುಮಾರು 60 ಲಕ್ಷ ಖರ್ಚು ಅಂದಾಜಿಸಲಾಗಿದೆ ಎಂದು ಮಂದಿರ ನಿರ್ಮಾಣ ಹಾಗೂ ಸೇವಾ ಸಮಿತಿಯವರು ತಿಳಿಸಿದರು.

0 Comments