Ticker

6/recent/ticker-posts

Ad Code

ಹಸುವನ್ನೂ ಬಿಡದ ಕಾಮುಕ - ಆರೋಪಿಗಾಗಿ ಹುಡುಕಾಟ


ಬೆಂಗಳೂರು : ಕಾಮುಕನೊಬ್ಬ ಮಲಗಿದ್ದ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ವಿಕೃತ ಕಾಮಿಯೊಬ್ಬ ಮೂಕ ಪ್ರಾಣಿ ಹಸುವಿನ ಮೇಲೆ ಅತ್ಯಾಚಾರವೆಸಗಿ ಅಮಾನವೀಯತೆ ಮೆರೆದಿದ್ದಾನೆ. ಈ ಆಘಾತಕಾರಿ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. 

ಕಾಟನ್‌ ಪೇಟೆ ಠಾಣಾವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ರಾತ್ರಿ ಬೈಕ್‌ನಲ್ಲಿ ಬಂದ ಅಪರಿಚಿತನೊಬ್ಬ ಮಲಗಿದ್ದ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದಾನೆ. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ ಕಾಟನ್‌ ಪೇಟೆ ಪೊಲೀಸರು ಕಾಮುಕನಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

Post a Comment

0 Comments