Ticker

6/recent/ticker-posts

Ad Code

ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ : ಇಬ್ಬರ ಬಂಧನ

 

ಬದಿಯಡ್ಕ : ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ತುಂಬಿದ ಬೀಡಿ ಸೇದುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬದಿಯಡ್ಕ  ಪೊಲೀಸರು ಬಂಧಿಸಿದ್ದಾರೆ. ಪೈಕ ಅರ್ಲಡುಕ್ಕದ ನವಾಸ್ ಪಿ.ಎ (28) ಮತ್ತು ನೆಲ್ಲಿಕಟ್ಟೆಯ ಮಡಿಕೇರಿ ಹೌಸ್‌ನ ಅಜ್ಮಲ್ ಜೋಸ್ (33) ಬಂಧಿತರು. 

ಬದಿಯಡ್ಕ ಸಬ್-ಇನ್ಸ್‌ಪೆಕ್ಟರ್ ರೂಪೇಶ್ ನೇತೃತ್ವದಲ್ಲಿ ಗಸ್ತು ತಿರುಗುತ್ತಿದ್ದಾಗ, ನೀರ್ಚಾಲ್‌ನ ಮೇಲಿನ ಪೇಟೆಯಲ್ಲಿರುವ ಬಸ್ ನಿಲ್ದಾಣದ  ಹತ್ತಿರ  ಧೂಮಪಾನ ಮಾಡುತ್ತಿದ್ದ ನವಾಸ್ ನನ್ನು ಪರಿಶೀಲಿಸಿದಾಗ ಗಾಂಜಾ ಸೇದುತ್ತಿರುವುದು ಕಂಡುಬಂದಿದ್ದು, ಆತನನ್ನು ಬಂಧಿಸಲಾಗಿದೆ. ನೆಲ್ಲಿಕಟ್ಟೆಯ ಪೈಕ ರಸ್ತೆ ಜಂಕ್ಷನ್‌ನಲ್ಲಿ ಅಜ್ಮಲ್‌ನನ್ನು ಬಂಧಿಸಲಾಗಿದೆ. ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Post a Comment

0 Comments