ತಿರುವನಂತಪುರ : ಯುಡಿಎಫ್ ನೀಡಿದ ಐದು ಇಂದಿರಾ ಗ್ಯಾರಂಟಿ ಗಳಲ್ಲಿ ಪ್ರಮುಖವಾದ 25 ಲಕ್ಷ ರೂಗಳ ಆರೋಗ್ಯ ವಿಮೆಯನ್ನು ಮಾಜಿ ಮುಖ್ಯಮಂತ್ರಿ ದಿ. ಉಮ್ಮನ್ ಚಾಂಡಿ ಸ್ಮರಣೆಗಾಗಿ ಕೇರಳ ಸರಕಾರ ಘೋಷಿಸಿದೆ. ಇಂದು ಆರಂಭಗೊಂಡ ಮುಖ್ಯಮಂತ್ರಿ ವಿ. ಡಿ. ಸತೀಶನ್ ನೇತೃತ್ವದ ಯುಡಿಎಫ್ ಸರ್ಕಾರದ ಸರಕಾರದ 16 ನೇ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ತಮ್ಮ ಮೊದಲ ನಿಲುಮೆ ಮಂಡನಾ ಭಾಷಣದಲ್ಲಿ ಯೋಜನೆ ಘೋಷಿಸಿದರು. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಜನರಿಗೆ ವಿವರಿಸಲು ಶ್ವೇತಪತ್ರವನ್ನು ಹೊರಡಿಸಲಾಗುವುದು ಎಂದು ಘೋಷಿಸಲಾಯಿತು. ಕಾಲೇಜು ವಿದ್ಯಾರ್ಥಿಗಳಿಗೆ ತಿಂಗಳಿಗೆ 1,000 ರೂ. ನೀಡಲಾಗುವುದು ಮತ್ತು ಕಲ್ಯಾಣ ಪಿಂಚಣಿಯನ್ನು 3,000 ರೂ.ಗೆ ಹೆಚ್ಚಿಸಲಾಗುವುದು ಎಂದು ಘೋಷಿಸಲಾಯಿತು. ಕೆಎಸ್‌ಆರ್‌ಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಉಮ್ಮನ್ ಚಾಂಡಿ ಆರೋಗ್ಯ ವಿಮೆ, ಕೃಷಿ ವಲಯಕ್ಕೆ ಒತ್ತು. ಕೇರಳವನ್ನು ಬಂದರು ಕೇಂದ್ರವನ್ನಾಗಿ ಪರಿವರ್ತಿಸಲಾಗುವುದು ಎಂಬ ಘೋಷಣೆ. ಕೃಷಿ ವೆಚ್ಚವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕೃಷಿ ಕ್ಷೇತ್ರದಲ್ಲಿ ಯಾಂತ್ರೀಕರಣ ವ್ಯಾಪಕವಾಗಲಿದೆ, ಮಹಿಳಾ ರೈತರಿಗೆ ಉತ್ತೇಜನ ನೀಡಲಾಗುವುದು ಮತ್ತು ಮಸಾಲೆ ರಫ್ತುಗಳನ್ನು ಸುಧಾರಿಸಲಾಗುವುದು ಎಂಬುದು ವಿಧಾನಸಭಾ ಅಧಿವೇಶನದ ಮುಖ್ಯ ಘೋಷಣೆಗಳಾಗಿದೆ.

0 Comments