ಉಪ್ಪಳ : ಬಡಗಿ ವೃತ್ತಿ ನಿರ್ವಹಿಸುತ್ತಿದ್ದ ಪ್ರತಾಪನಗರ ಗಂಗಾಧರ ಆಚಾರ್ಯ (62) ಹೃದಯಾಘಾತದಿಂದ ಇಂದು ಮಧ್ಯಾಹ್ನ ನಿಧನರಾದರು . ಮನೆಯಲ್ಲಿ ಎದೆ ಉರಿ ಕಾಣಿಸಿಕೊಂಡ ಇವರನ್ನು ಉಪ್ಪಳದ ಖಾಸಗೀ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿರುವ ನಡುವೆ ನಿಧನ ಹೊಂದಿದರು. ಮೃತರು ಉತ್ತಮ ಕಾರ್ಪೆಂಟರ್ ವೃತ್ತಿ ನಿರ್ವಹಿಸುತ್ತಿದ್ದು ಈ ಹಿಂದೆ ಗಲ್ಪ್ ರಾಷ್ಟ್ರಗಳಲ್ಲಿ ಉದ್ಯೋಗ ನಿರ್ವಹಿಸಿ ತಾಯ್ನಾಡಿಗೆ ಮರಳಿದ್ದರು. ಇದೀಗ ಸೋಂಕಾಲಿನಲ್ಲಿ ವಾಸಿಸುತ್ತಿದ್ದು ಊರಲ್ಲಿ ಬಡಗಿ ವೃತ್ತಿ ನಿರ್ವಹಿಸುತ್ತಿದ್ದು ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಕಲಾವತಿ ಮಕ್ಕಳಾದ ಮಿಥುನ್, ಯಶಸ್ವಿನಿ,ಕೀರ್ತಿಶ್ರೀ ಹಾಗೂ ಸಹೋದರರಾದ ಮಾಧವ ಆಚಾರ್ಯ ,ಜನಾರ್ಧನ ಆಚಾರ್ಯ, ಸಹೋದರಿಯರಾದ ಲೀಲಾವತಿ, ಯಮುನ ಹಾಗೂ ಅಪಾರ ಬಂಧುಬಳಗವನ್ನಗಲಿದ್ದಾರೆ.

0 Comments