ಪೈವಳಿಕೆ : ಪ್ರಮುಖ ಕನ್ನಡ ಮಾಧ್ಯಮ ಶಾಲೆಯಾದ ಪೈವಳಿಕೆ ಕಾಯರ್ ಕಟ್ಟೆ ಸರಕಾರಿ ಉನ್ನತ ಪ್ರೌಢಶಾಲೆಯ ನವೀಕೃತ ಹೈಸ್ಕೂಲ್ ವಿಭಾಗದ ಶಾಲಾ ಕಚೇರಿಯನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ ಅವರು ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಅನುದಾನದೊಂದಿಗೆ ಈ ಕಚೇರಿಯನ್ನು ಆಧುನಿಕ ರೀತಿಯಲ್ಲಿ ನವೀಕರಿಸಲಾಗಿದೆ. ಈ ಹಿಂದೆ ಹಳೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಶಾಲಾ ಕಚೇರಿಯು ಇನ್ನು ಮುಂದೆ ಸಕಲ ಸೌಕರ್ಯಗಳೊಂದಿಗೆ ಸಜ್ಜುಗೊಂಡಿರುವ ಈ ನೂತನ ಸುಸಜ್ಜಿತ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ. ಸರಳ ಕಾರ್ಯಕ್ರಮದಲ್ಲಿ ವಾರ್ಡ್ ಸದಸ್ಯೆ ಯಶೋದ ಚಿಪ್ಪಾರು, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಆದಂ ಬಳ್ಳೂರು, ಎಸ್‌ಎಂಸಿ ಚೇರ್ಮನ್ ಅಬ್ದುಲ್ ರಜಾಕ್ ಪೆರ್ವೋಡಿ, ಪಿಟಿಎ ಉಪಾಧ್ಯಕ್ಷ ಖಲೀಲ್ ಚಿಪ್ಪಾರು, ಸಿದ್ದಿಕ್ ಉಸ್ತಾದ್ ಬಾಯಾರು, ಶಾಲಾ ಪ್ರಾಂಶುಪಾಲರಾದ ಡೊಮಿನಿಕ್ ಆಗಸ್ಟಿನ್ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಭಾಗ್ಯಲಕ್ಷ್ಮಿ, ಸೀನಿಯರ್ ಅಸಿಸ್ಟೆಂಟ್ ಹರೀಶ್ ಕುಮಾರ್ ಬಿ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಶಾಲೆಯ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ರಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

0 Comments