Ticker

6/recent/ticker-posts

ಸ್ನಾನ ಮಾಡಲೆಂದು ಕೊಳದಲ್ಲಿ ಇಳಿದ 9 ನೇ ತರಗತಿ ವಿದ್ಯಾರ್ಥಿನಿ ನೀರಿನಲ್ಲಿ ಮುಳುಗಿ ಮೃತ್ಯು


 ಗೆಳತಿಯರ ಜತೆ ಸ್ನಾನಕ್ಕೆಂದು ಕೊಳಕ್ಕಿಳಿದ ಬಾಲಕಿ ಮೃತಪಟ್ಟ ಘಟನೆ ನಡೆದಿದೆ. ತಿರೂರು ಪಾರಪರಂಬಿಲ್ ಮುಸ್ತಫ- ನಜಲಾಬಿ ದಂಪತಿಯ ಪುತ್ರಿ  ಫಾತಿಮ ಮಿನ್ಹ(13) ಮೃತಪಟ್ಟ ಬಾಲಕಿ. ಈಕೆ ವಳವನ್ನೂರು ಶಾಲೆಯಲ್ಲಿ 9 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ನಿನ್ನೆ (ಆದಿತ್ಯವಾರ) ಮದ್ಯಾಹ್ನ ಈ ಘಟನೆ ನಡೆದಿದೆ. ಗೆಳತಿಯರ ಜತೆ ಸ್ನಾನಕ್ಕೆಂದು ಕೊಳದಲ್ಲಿ ಇಳಿದಾಗ ಕಾಲು ಜಾರಿ ಮುಳುಗಿದಳೆನ್ನಲಾಗಿದೆ. ಊರವರು ಸೇರಿ ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ.

Post a Comment

0 Comments