ಕೋಜಿಕ್ಕೋಡ್: ನಿಲಂಬೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಐಕ್ಯ ಪ್ರಜಾಪ್ರಭುತ್ವ ರಂಗ ಗೆಲುವು ಸಾಧಿಸಿದೆ. ಐಕ್ಯ ರಂಗದ ಅಭ್ಯರ್ಥಿ ಆರ್ಯಾಡನ್ ಶೌಕತ್ ತನ್ನ ಸಮೀಪದ ಪ್ರತಿಸ್ಪರ್ದಿ ಸಿಪಿಎಂನ ಎಂ.ಸ್ವರಾಜ್ ರನ್ನು 11077 ಮತಗಳಿಂದ ಪರಾಭವಗೊಳಿಸಿದ್ದಾರೆ. ಆರ್ಯಾಡನ್ ಶೌಕತ್ ಅವರು 76616 ಮತಗಳನ್ನು ಪಡೆದರೆ ಎಂ ಸ್ವರಾಜ್ 65661 ಮತಗಳನ್ನು ಪಡೆದರು. ಬಿಜೆಪಿ ಅಭ್ಯರ್ಥಿ 8536 ಮತಗಳನ್ಪನು ಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಮಾಜಿ ಶಾಸಕ ಪಿ.ವಿ.ಅನ್ವರ್ 19593 ಮತಗಳನ್ನು ಪಡೆದು ನಿರ್ಣಾಯಕ ಶಕ್ತಿಯಾಗಿ ಹೊರ ಹೊಮ್ಮಿದ್ದಾರೆ. ಪಿ.ವಿ.ಅನ್ವರ್ ಪಡೆದ ಮತಗಳು, ಹಾಗೂ ನಿಲಂಬೂರು ಸೋಲು ಎಡರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಲಿದೆ.
ಕಾಂಗ್ರೆಸ್ ಪಕ್ಷದ ಸಿಟ್ಟಿಂಗ್ ಸೀಟ್ ಆಗಿದ್ದ ನಿಲಂಬೂರುವಿನಲ್ಲಿ ಕಳೆದ ಎರಡು ಅವಧಿಯಲ್ಲಿ ಎಡರಂಗ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಪಿ.ವಿ.ಅನ್ವರ್ ಗೆಲುವು ಸಾಧಿಸಿದ್ದರು. ಆದರೆ ಎಡರಂಗ ಹಾಗೂ ಪಿ.ವಿ.ಅನ್ವರ್ ಮಧ್ಯೆ ಭಿನ್ನಮತ ಉಂಟಾದ ಹಿನ್ನೆಲೆಯಲ್ಲಿ ಪಿ.ವಿ.ಅನ್ವರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಈ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿತ್ತು
(ಅಂಕಿ ಅಂಶಗಳು ಕೊನೆಯ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ)
0 Comments