ಉಪ್ಪಳ : ಕೊಡುಗೈದಾನಿಗಳು ,ಸಮಾಜ ಸೇವಕರುಗಳಾದ ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಹಾಗೂ ಕೆ.ಕೆ.ಶೆಟ್ಟಿ ಮುಂಡಪ್ಪಳ್ಳ ಇವರ ನೇತೃತ್ವದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಪ್ರ ಪ್ರಥಮ ಬಾರಿಗೆ ಎಲ್ಲಾ ಬಂಟ ಸಮಾಜದ ಬಾಂದವರನ್ನ ಒಂದೇ ಸೂರಿನಡಿ ತರಲು ಕಾಸರಗೋಡು ಜಿಲ್ಲಾ ಬಂಟರ ಸಮ್ಮಿಲನ 2025 ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದೆ.ಆ.10 ಆದಿತ್ಯವಾರ ಬೆಳಿಗ್ಗೆ 8. 30 ರಿಂದ ಸಂಜೆ 6.30 ರ ವರೆಗೆ ಮಂಗಲ್ಪಾಡಿ ಮನೆಯ ಗದ್ದೆಯಲ್ಲಿ ಆಟಿದ ಕೂಟ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ ಯಿಂದ ಸಂಜೆ ವರೆಗೆ ವಿವಿಧ ಕ್ರೀಡಾ ಕೂಟ, ವಿವಿಧ ಸಭಾ ಕಾರ್ಯಕ್ರಮ, ನಾಟ್ಯ ಹಾಸ್ಯ ಭರಿತ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ ಆಟಿ ತಿಂಗಳ ವಿಶೇಷ ಭೂರಿ ಭೋಜನದ ವ್ಯವಸ್ಥೆ ಎಲ್ಲಾ ಹಮ್ಮಿಕೊಳ್ಳಲಾಗಿದೆ.
ಕಾಸರಗೋಡು ಜಿಲ್ಲೆಯ ಬಂಟರ ಒಂದು ಸಮ್ಮಿಲನ ದಲ್ಲಿ ಚಲನಚಿತ್ರನಟ ನಟಿಯರ ವಿಶೇಷ ತಾರಾ ಮೆರುಗು ಕೂಡ ಇದೆ.
ಕಾಸರಗೋಡು ಜಿಲ್ಲೆಯ ಎಲ್ಲಾ ಬಂಟ ಸಮಾಜದ ಬಾಂದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಜಿಲ್ಲಾ ಅಧ್ಯಕ್ಷರಾದ ನ್ಯಾಯವಾದಿ ಸುಬ್ಬಯ್ಯ ರೈ ಹಾಗೂ ಆಯೋಜನ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
0 Comments