Ticker

6/recent/ticker-posts

ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಮದ್ಯ ಸಾಗಾಟ ಪ್ರಕರಣದ ಆರೋಪಿ 11 ವರ್ಷಗಳ ನಂತರ ಸೆರೆ


 ಮುಳ್ಳೇರಿಯ:  ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಮದ್ಯ ಸಾಗಾಟ ಪ್ರಕರಣದ ಆರೋಪಿಯನ್ನು 11 ವರ್ಷಗಳ ನಂತರ ಬಂಧಿಸಲಾಗಿದೆ. ಪುತ್ತೂರು, ಕರ್ಣೂರು ಮುರ್ಡೂರು ನಿವಾಸಿ ಅಣ್ಣು(41) ಬಂಧಿತ ಆರೋಪಿ. 2014 ಅಗಸ್ಟ್ 8 ರಂದು ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ ಕರ್ಣಾಟಕ ನಿರ್ಮಿತ ಮದ್ಯವನ್ನು ಆದೂರು ಪೊಲೀಸರು ವಶಪಡಿಸಿದ್ದರು. ಈ ಪ್ರಕರಣದಲ್ಲಿ ಆಟೋ ಚಾಲಕನನ್ನು ಬಂಧಿಸಲಾಗಿತ್ತು. ಇದೇ ಆಟೋದಲ್ಲಿದ್ದ ಅಣ್ಣು ಓಡಿ ಪರಾರಿಯಾಗಿದ್ದನು. ಅನಂತರ ಪೊಲೀಸರು ಹಲವು ಸಲ ದಾಳಿ ನಡೆಸಿದರೂ ಅಣ್ಣುವನ್ನು ಬಂಧಿಸಲಾಗಲಿಲ್ಲ. ಅನಂತರ ಈತನ ವಿರುದ್ದ ನ್ಯಾಯಾಲಯ ವಾರೆಂಟ್ ಹೊರಡಿಸಿತ್ತು. ಬೇಕಲ ಡಿ.ವೈ.ಎಸ್.ಪಿ.ವಿ.ವಿ. ಮನೋಜರ ಆದೇಶದಂತೆ ಆದೂರು ಎಸ್.ಐ.ಕೆ.ವಿನೋದ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿತ್ತು

Post a Comment

0 Comments