ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ 181.44 ಲೀಟರ್ ಕರ್ಣಾಟಕ, ಗೋವಾ ನಿರ್ಮಿತ ವಿದೇಶ ಮದ್ಯವನ್ನು ವಶಪಡಿಸಿರುವ ಎಕ್ಸ್ಪ್ರೆಸ್ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಚಾವಕ್ಕಾಡ್ ನಿವಾಸಿ ಅನ್ಸೀಫ್(38), ಚಂದ್ರಶೇಖರ(39) ಬಂಧಿತ ಆರೋಪಿಗಳು. ಇಂದು (ಮಂಗಳವಾರ) ಎಕ್ಸ್ಪ್ರೆಸ್ ಇನ್ಸ್ಪೆಕ್ಟರ್ ವಿಷ್ಣು ಪ್ರಕಾಶ್ ಹಾಗೂ ತಂಡ ಕಾಸರಗೋಡು ಬಳಿಯ ಮೇಲ್ಪರಂಬ ಕೊಪ್ಪಳದಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ 129.6 ಲೀಟರ್ ಕರ್ಣಾಟಕ ನಿರ್ಮಿತ ವಿದೇಶ ಮದ್ಯ, 51.84 ಲೀಟರ್ ಗೋವಾ ನಿರ್ಮಿತ ವಿದೇಶ ಮದ್ಯ (ಒಟ್ಟು 181.44 ಲೀಟರ್) ವಶಪಡಿಸಲಾಗಿದೆ. ಎಕ್ಸ್ಪ್ರೆಸ್ ಇನ್ಸ್ಪೆಕ್ಟರ್ ಶ್ರೀನಿವಾಸನ್ ಪತ್ತಿಲ್, ಪ್ರಮೋದ್ ಕುಮಾರ್ ವಿ, ಅಜೀಶ್.ಸಿ, ಮಂಜುನಾಥ ವಿ, ರಾಜೇಶ್ ಪಿ, ಶಿಜಿತ್ ವಿ, ಅಥುಲ್ ಟಿ.ವಿ.ಎಂಬಿವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು
0 Comments