ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಪದ್ಮನಾಭ ಶೆಟ್ಟಿ ಕೆ. ಚಕ್ಕಿತಡ್ಕ ಹಾಗೂ ಮೊಕ್ತೇಸರರಾಗಿ ಯೋಗೀಶ ಖಂಡೇರಿ, ನಾರಾಯಣ ಬಿ. ಬಾಳೆಮೂಲೆ, ಕೃಷ್ಣ ನಾಯ್ಕ ಬಾಳೆಮೂಲೆ, ನಾರಾಯಣನ್ ಕೆ. ಕಾಟುಕುಕ್ಕೆ ಅಧಿಕಾರ ಸ್ವೀಕರಿಸಿದರು.
2 ವರ್ಷ ಅವಧಿಗೆ ಅನು ವಂಶಿಕ ವಲ್ಲದ ಟ್ರಸ್ಟಿಗಳನ್ನು ನೇಮಕಗೊಳಿಸಿ ಮಲಬಾರ್ ದೇವಸ್ವಂ ಮಂಡಳಿಯ ವಿಭಾಗೀಯ ಹೊರಡಿಸಿದ್ದು ಇದರಂತೆ ಕಾಟುಕುಕ್ಕೆ ಶಾಲಾ ಪ್ರಾಂಶುಪಾಲರು ಜನಾನುರಾಗಿಯೂ ಆದ ಪದ್ಮನಾಭ ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿತ್ತು. ಈ ಹಿಂದೆ ಈ ಪರಿಸರದ ಸಂಘ ಸಂಸ್ಥೆಗಳಲ್ಲಿ ಮತ್ತು ಕಳೆದ ಬ್ರಹ್ಮಕಲಶೋತ್ಸವ ಸಂದರ್ಭಗಳಲ್ಲಿ ದುಡಿದು ಜನಪ್ರೀತಿಗೆ ಪಾತ್ರರಾಗಿದ್ದರು. ನೂತನ ಟ್ರಸ್ಟಿಗಳಿಗೆ ಅಧಿಕಾರ ಹಸ್ತಾಂತರ ಸಂದರ್ಭ ನೀಲೇಶ್ವರದ ಮಲಬಾರ್ ದೇವಸ್ವಂ ಮಂಡಳಿಯ ಸಹಾಯಕ ಆಯುಕ್ತ ರಘ ಅವರ ಸಮ್ಮುಖದಲ್ಲಿ ನಿಕಟಪೂರ್ವ ಆಡಳಿತ ಮೊಕ್ತೇಸರ ಪಡ್ಡಂಬೈಲ್ ತಾರನಾಥ ರೈ ಪೆರ್ಲ ದೇವಸ್ಥಾನದ ಕಚೇರಿಯಲ್ಲಿ ಅಧಿಕಾರ ಹಸ್ತಾಂತರಿಸಿದರು.
0 Comments