Ticker

6/recent/ticker-posts

ವ್ಯಾಪಕ ಭ್ರಷ್ಟಾಚಾರ, ಅಭಿವೃದ್ದಿ ಮರೀಚಿಕೆ; ಕಾಸರಗೋಡು ನಗರಸಭೆಯ ಮುಸ್ಲಿಂ‌ಲೀಗ್ ಆಡಳಿತದ ವಿರುದ್ದ ಬಿಜೆಪಿ ಮುತ್ತಿಗೆ


 ಕಾಸರಗೋಡು:  ಅಭಿವೃದ್ದಿ ರಹಿತ- ಭ್ರಷ್ಟಾಚಾರ ನಡೆಸುತ್ತಿರುವ ಕಾಸರಗೋಡು ನಗರಸಭೆಯ ಮುಸ್ಲಿಂ ಲೀಗ್ ಆಡಳಿತದ ಕಾರ್ಯವೈಖರಿಯ ವಿರುದ್ದ ಬಿಜೆಪಿ ನಗರಸಭಾ ಆಶ್ರಯದಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಮುತ್ತಿಗೆ ನಡೆಯಿತು.

 ಪ್ರತಿಭಟನೆಯನ್ನು ಪಕ್ಷದ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ಉದ್ಘಾಟಿಸಿದರು. ಕಾಸರಗೋಡು ನಗರದ ಬಹುತೇಕ ರಸ್ತೆಗಳು  ವಾಹನ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡುತ್ತಿದೆ.  ನಗರದ ಅಭಿವೃದ್ಧಿಗಾಗಿ ಸರಕಾರದಿಂದ ನಿಧಿ ಪಡೆಯಲು ಆಡಳಿತ ವಿಫಲವಾಗಿದೆ ಎಂದವರು ದೂರಿದರು. ವರಪ್ರಸಾದ್ ಕೋಟೆಕಣಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನಿಲ್, ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು, ಇತರರಾದ ಸವಿತ ಟೀಚರ್,  ಪ್ರಮಿಳಾ ಮಜಲ್,  ವೀಣ ಅರುಣ್ ಶೆಟ್ಟಿ, ಜನಪ್ರತಿನಿಧಿಗಳು, ಮುಂದಾಳುಗಳು ಭಾಗವಹಿಸಿದರು. ಮಲ್ಲಿಕಾರ್ಜುನ ಕ್ಷೇತ್ರ ಪರಿಸರದಿಂದ ಹೊರಟ ಮೆರವಣಿಗೆಯನ್ನು  ನಗರಸಭಾ ಪರಿಸರದಿಂದ ಪೊಲೀಸರು ತಡೆದರು. ಪ್ರತಿಭಟನೆ ನಡೆಸಿದ ಕಾರ್ಯಕರ್ತರ ಮೇಲೆ ಪೊಲೀಸರು ಜಲಪೀರಂಗಿ ಪ್ರಯೋಗಿಸಿದರು

Post a Comment

0 Comments