Ticker

6/recent/ticker-posts

ಎಕ್ಸ್ಪ್ರೆಸ್ ಅಧಿಕಾರಿಗಳಿಗೆ ನಾಯಿಯಿಂದ ಕಚ್ಚಿಸಿದ ಆರೋಪಿ ಸ್ಕೂಟರಿನಲ್ಲಿ ಮದ್ಯ ಸಾಗಿಸುತ್ತಿದ್ದ ವೇಳೆ ಸೆರೆ


 ಕಾಸರಗೋಡು: ಎಕ್ಸ್ಪ್ರೆಸ್ ಅಧಿಕಾರಿಗಳಿಗೆ ನಾಯಿಯಿಂದ ಕಚ್ಚಿಸಿದ ಆರೋಪಿ ಸ್ಕೂಟರಿನಲ್ಲಿ ಮದ್ಯ ಸಾಗಿಸುತ್ತಿದ್ದ ವೇಳೆ  ಸೆರೆ ಸಿಕ್ಕಿದ್ದಾನೆ.  ಕಳನಾಡು ಕೈನೋತ್ ನಿವಾಸಿ ಡಿ.ಉದಯನ್ ಬಂಧಿತನಾದ ವ್ಯಕ್ತಿ. ಸ್ಕೂಟರಿನಲ್ಲಿ 5.4 ಲೀಟರ್ ಗೋವಾ ಮದ್ಯ,  4.14 ಲೀಟರ್ ಕರ್ಣಾಟಕ ನಿರ್ಮಿತ ವಿದೇಶ ಮದ್ಯ ಸಾಗಿಸುತ್ತಿದ್ದ ವೇಳೆ ನಿನ್ನೆ (ಸೋಮವಾರ) ರಾತ್ರಿ ಮೇಲ್ಪರಂಬ ಬಳಿಯಿಂದ ಈತನನ್ನು ಸೆರೆ ಹಿಡಿಯಲಾಗಿದೆ.  ಈತನನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರಿಪಡಿಸಲಾಗಿದೆ.

      ಈತ  ಈ ಹಿಂದೆಯೂ ಅಬಕಾರಿ ಪ್ರಕರಣದಲ್ಲಿ ಆರೋಪಿಯಾಗಿದ್ದನೆಂದು ತಿಳಿದು ಬಂದಿದೆ. ಈತನ ಮನೆಗೆ ದಾಳಿ‌ ನಡೆಸಲು  ಎಕ್ಸ್ಪ್ರೆಸ್ ಅಧಿಕಾರಿಗಳು ಬಂದಾಗ ಕಟ್ಟಿ ಹಾಕಿದ ನಾಯಿಯನ್ನು ಬಿಟ್ಟು ಕಚ್ಚಿಸಿದ್ದನು. ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ ಎಕ್ಸ್ಪ್ರೆಸ್ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್, ಇತರರಾದ ಸಿ.ಕೆ.ವಿ‌.ಸುರೇಶ್, ಶಿಜಿತ್, ಅಥುಲ್ ಟಿ.ವಿ, ರಾಜೇಶ್.ಪಿ ಮೊದಲಾದವರು ಭಾಗವಹಿಸಿದರು

Post a Comment

0 Comments