Ticker

6/recent/ticker-posts

ಹಿರಿಯ ಎಲ್. ಐ.ಸಿ ಏಜೆಂಟ್ ಮಂಜೇಶ್ವರ ರೈಲು ನಿಲ್ದಾಣ ಬಳಿಯ ರಾಧಾ ಎಲೆಕ್ಟಿಕಲ್ ಮಾಲಕ ಬಡಾಜೆ ಚೌಕಿ ನಿವಾಸಿ ಸೋಮಶೇಖರ ಬಡಾಜೆ ನಿಧನ


 ಮಂಜೇಶ್ವರ: ಹಿರಿಯ ಎಲ್. ಐ.ಸಿ ಏಜೆಂಟ್ ಮಂಜೇಶ್ವರ ರೈಲು ನಿಲ್ದಾಣ ಸಮೀಪವಿರುವ ರಾಧಾ ಎಲೆಕ್ಟಿಕಲ್ ಮಾಲಕ ಬಡಾಜೆ ಚೌಕಿ ನಿವಾಸಿ ಸೋಮಶೇಖರ ಬಡಾಜೆ (56) ಇಂದು(ಮಂಗಳವಾರ) ಮುಂಜಾನೆ  ಹೃದಯಾಘಾತದಿಂದ ನಿಧನರಾದರು. ಕಳೆದ 15 ವರ್ಷಗಳಿಂದ ಎಲ್.ಐ.ಸಿ.ಏಜೆಂಟ್,  ಅಲ್ಲದೆ ಹಲವಯ ವರ್ಷಗಳಿಂದ ಮಂಜೇಶ್ವರ ರೈಲು ನಿಲ್ದಾಣ ಸಮೀಪವಿರುವ 'ರಾಧಾ ಎಲೆಕ್ಟಿಕಲ್'' ಎಂಬ ಇಲೆಕ್ಟಿಕ್ ಸಂಸ್ಥೆಯ ಮಾಲಕರಾಗಿದ್ದರು.ಇವರಯ ದಿವಂಗತರಾದ ದೇರು ಮೂಲ್ಯ- ರಾಧಾ ದಂಪತಿಯ ಪುತ್ರನಾಗಿದ್ದಾರೆ. ಮೃತರು ಪತ್ನಿ ಚಂದ್ರಿಕಾ, ಮಕ್ಕಳಾದ ಸಮರ್ಥ್, ಸಮೃದ್ಧಿ, ಸಹೋದರಿಯರಾದ ರಮಣಿ, ಶೋಭಾ, ಚಂದ್ರಾವತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಏಕ ಸಹೋದರ: ನಾರಾಯಣ ಮೂರು ತಿಂಗಳ ಹಿಂದೆ ನಿಧನರಾಗಿದ್ದರು.

Post a Comment

0 Comments