Ticker

6/recent/ticker-posts

54ನೇ ವರ್ಷದ ಬದಿಯಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ


 54ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ನ್ಯಾಯವಾದಿ ನರಸಿಂಹ ಶೆಣೈ ಬಿಡುಗಡೆಗೊಳಿಸಿದರು. ಬಡಿಯಡ್ಕ ಗ್ರಾಮಪಂಚಾಯತು ಸದಸ್ಯರಾದ ಶ್ರೀ ಬಾಲಕೃಷ್ಣ ಶೆಟ್ಟಿ ಕಡಾರ್ ಮುಖ್ಯಅತಿಥಿ ಯಾಗಿ ಭಾಗವಹಿಸಿದರು. ಸಮಿತಿಯ ಅಧ್ಯಕ್ಷರಾದ ಶ್ರೀ ನರೇಂದ್ರ ಬಿ ಯನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು.ಸಮಿತಿಯ ಕೋಶಾಧಿಕಾರಿಯಾದ ಶ್ರೀ ದೇವದಾಸ್ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿಯ ಸದಸ್ಯರು,ಭಕ್ತಾಭಿಮಾನಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಗುರುಪ್ರಸಾದ್ ರೈ ಕೆ ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ್ ಬಿ ಕೆ ವಂದಿಸಿದರು.

Post a Comment

0 Comments