Ticker

6/recent/ticker-posts

30 ವರ್ಷಗಳ ಕಾಲ ತಲೆ ಮರೆಸಿಕೊಂಡಿದ್ದ ಆರೋಪಿಯ ಸೆರೆ


 ಮುಳ್ಳೇರಿಯ: 30 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೇಕಲ ಡಿ.ವೈ.ಎಸ್.ಪಿ.ಯವರ ಆದೇಶದಂತೆ ಆದೂರು ಎಸ್.ಐ.ಎ.ಕೆ‌.ವಿನೋದ್ ಕುಮಾರರ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಅಡೂರು ಮೂಲೆ ನಿವಾಸಿ ಎ.ಇ.ಬಾದಿಷ(48)  ಬಂಧಿತ ಆರೋಪಿ. 1995 ಎಪ್ರಿಲ್ 4 ರಂದು ಆದೂರು ಮಞಂಪಾರೆ ನಿವಾಸಿ ಅಬ್ದುಲ್ ಖಾದರರ ಪುತ್ರ ಅಬೂಬಕರ್ ಎಂಬಿವರನ್ನು ತಡೆದು ನಿಲ್ಲಿಸಿ ಹಲ್ಲೆಗೈದು,ಅವರ ತಾಯಿಯನ್ನು ನೂಕಿ ಹಾಕಿ, ಕಲ್ಲೆಸೆದು ಮನೆಯ ಹಂಚು ಒಡೆದ ಪ್ರಕರಣದಲ್ಲಿ  ಬಂಧಿತ ಬಾದಿಷ ಆರೋಪಿಯಾಗಿದ್ದಾರೆ. ಅನಂತರ ನಾಪತ್ತೆಯಾದ ಬಾದಿಷನನ್ನು ನಗಯಾಯಾಲಯವು ತಲೆಮರೆಸಿಕೊಂಡ ಆರೋಪಿ ಎಂದು ಘೋಷಿಸಿತ್ತು. ಇಂದು( ಮಂಗಳವಾರ) ಬೆಳಗ್ಗೆ ಪೈವಳಿಕೆ ಬಳಿಯ ಮಡ್ವಗದ್ದೆಯಿಂದ ಆರೋಪಿಯನ್ನು ಬಂಧಿಸಲಾಗಿದೆ. ಎ.ಎಸ್.ಐ‌. ಸತ್ಯ ಪ್ರಕಾಶ್, ಇತರರಾದ ರಾಘವನ್, ಚಾಲಕ ಹರೀಶ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು

Post a Comment

0 Comments